Breaking News

ಕೇರ್ಪಡ : ದೇವಸ್ಥಾನದಲ್ಲಿ ಚೌತಿ ಪೂಜೆ ಸಮಿತಿ ವತಿಯಿಂದ ಶಾಸಕರಿಗೆ ಮನವಿ

Advt_Headding_Middle
Advt_Headding_Middle

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮೇ. ೧೮ರಂದು ಬೆಳಿಗ್ಗೆ ಗಣಪತಿ ಹವನ, ಬಲಿವಾಡು, ವಿಶೇಷಪೂಜೆ, ಸಂಜೆ ದುರ್ಗಾನಮಸ್ಕಾರ ಪೂಜೆ ನಡೆಯಿತು.
ದೇವಸ್ಥಾನದ ಶಿಲಾಮಯ ಮೇಲ್ಛಾವಣಿಯು ಮಳೆ ನೀರಿನಿಂದ ಸೋರುತ್ತಿದ್ದು ಅದರ ಮೇಲ್ಛಾವಣಿ ತಾಮ್ರದ ಹೊದಿಕೆ ಅವಶ್ಯಕವಿದ್ದು, ಅದಕ್ಕೆ ೧೫ರಿಂದ ೨೦ ಲಕ್ಷ ಅಂದಾಜು ಮತ್ತು ದಏವಳದ ತೀರ್ಥಕೆರೆ ಕಲ್ಯಾಣಿಯ ಅಭಿವೃದ್ಧಿಗೆ ಸುಮಾರು ೨೦ ಲಕ್ಷ ಖರ್ಚು ತಗಲಬಹುದಾದರಿಂದ ಶಾಸಕರಿಗೆ ತಾ.ಪಂ. ಮಾಜಿ ಸದಸ್ಯೆ ಭಾಗ್ಯಪ್ರಸನ್ನ, ಉದ್ಯಮಿ ಪ್ರಸನ್ನ ಹಾಗೂ ರಘುನಾಥ ರೈಯವರ ಮೂಲಕ ದೇವಸ್ಥಾನದ ಆಡಳಿತ ಮಂಡಳಿಯವರು ಮನವಿ ಸಲ್ಲಿಸಿದರು. ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಬೈಪಡಿತ್ತಾಯರು ವಿಶೇಷ ಪೂಜಾ ಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ ಪಿ.ಡಿ., ಸದಸ್ಯೆ ರಾಜೀವಿ ರೈ ಕಲ್ಲೇರಿ, ಮಾಜಿ ಸದಸ್ಯ ವೆಂಕಪ್ಪ ಗೌಡ ಆಲಾಜೆ, ಜಾನಕಿ ಮುರುಳ್ಯ, ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರರಾದ ರಘುನಾಥ ರೈ ಕೆ.ಎನ್. ಅಲೆಂಗಾರ, ಪ್ರಸನ್ನ ಕೆ., ಭಾಗ್ಯಪ್ರಸನ್ನ, ಸೇವಾಸಮಿತಿ ಅಧ್ಯಕ್ಷ ಶಿವಾನಂದ ನಾಗಮಜಲು, ಮಹಿಷಮರ್ದಿನಿ ಸೇವಾ ಸಮಿತಿ ಅಧ್ಯಕ್ಷೆ ಗುಣವತಿ ನಾವೂರು, ಬಾಲಕೃಷ್ಣ ಆಳ್ವ, ಉದಯಕುಮಾರ್ ರೈ ನಾಗನಕಜೆ, ಸುಂದರ ಗೌಡ ಆರೆಂಬಿ, ನಾಗೇಶ್ ಆಳ್ವ ಕಟ್ಟಬೀಡು, ಗಂಗಾಧರ ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು. (ವರದಿ: ಎಎಸ್‌ಎಸ್ ಅಲೆಕ್ಕಾಡಿ)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.