ಶ್ರೀ ಕೇಶವಕೃಪಾದಲ್ಲಿ ವಿದ್ಯಾರ್ಥಿಗಳ ‘ಪ್ರತಿಭೋಜ್ವಲನ’: ಮನಸೂರೆಗೊಂಡ ವೇದ-ಯೋಗ-ಕಲೆಗಳ ವೈವಿಧ್ಯಮಯ ಪ್ರದರ್ಶನ

Advt_Headding_Middle
Advt_Headding_Middle
Advt_Headding_Middle

ಸುಳ್ಯದಲ್ಲಿ ಕಳೆದೆರಡು ದಶಕಗಳಿಂದ ವೇದದೊಂದಿಗೆ ಯೋಗ ಮತ್ತು ಕಲೆಯನ್ನು ಜೋಡಿಸಿಕೊಂಡು ವೇದ-ಯೋಗ-ಕಲಾ ಶಿಬಿರವನ್ನು ಆಯೋಜಿಸುತ್ತಿರುವ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವಿದ್ಯಾರ್ಥಿಗಳ ಈ ವರ್ಷದ ‘ಪ್ರತಿಭೋಜ್ವಲನ’ ಕಾರ್ಯಕ್ರಮವು ಮೇ ೧೭ರಂದು ಶ್ರೀ ಕೇಶವಕೃಪಾ ಸಭಾಂಗಣದಲ್ಲಿ ನಡೆಯಿತು.

ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಗಣೇಶ ಸೂಕ್ತ, ರುದ್ರಪ್ರಶ್ನಾ, ಶಾಂತಿಮಂತ್ರಗಳು, ದೇವೀ ಸೂಕ್ತ ಮುಂತಾದ ಮಂತ್ರಗಳನ್ನು ಪ್ರಾಚೀನ ಋಷಿ ಮುನಿಗಳು ಹಾಕಿಕೊಟ್ಟ ಲಯಬದ್ಧ ಉಚ್ಛಾರ-ವಿಧಾನದೊಂದಿಗೆ ಪದ ಪಾಠ, ಘನ ಪಾಠ, ಜಟಾ ಪಾಟ ಮತ್ತು ಕ್ರಮ ಪಾಠದ ಮೂಲಕ ಪ್ರಸ್ತುತಪಡಿಸಿದ್ದು ವೇದ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಯಿತು. ಯೋಗ ಪ್ರದರ್ಶನದಲ್ಲಿ ಕುಳಿತು-ನಿಂತು ಮತ್ತು ಮಲಗಿ ಮಾಡುವ ವಿವಿಧ ಆಸನಗಳ ಪ್ರತ್ಯೇಕ ಯೋಗ ಗುಚ್ಛಗಳ ಪ್ರದರ್ಶನದ ಜೊತೆಗೆ ಆಯಾಯ ಆಸನಗಳ ಪ್ರಯೋಜನವನ್ನು ವಿವರಿಸಲಾಯಿತು. ಕಲಾ ಪ್ರದರ್ಶನದಲ್ಲಿ ಕಂಸಾಳೆ, ಕೋಲಾಟ, ನಾಟಕ, ಜನಪದ ನೃತ್ಯ, ಹಾಡು, ಯಕ್ಷಗಾನ, ಮುಂತಾದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸುವುದರ ಜೊತೆಗೆ ವೇದಿಕೆ ನಿರ್ವಹಣೆಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟ ವಿದ್ಯಾರ್ಥಿಗಳು ಸಭಾಕಾರ್ಯಕ್ರಮವನ್ನು ನಿರ್ವಹಿಸುವ ಕಲೆಯಲ್ಲೂ ತಾವು ಸಮರ್ಥರೆಂಬುದನ್ನು ಸಾಬೀತುಪಡಿಸಿದರು. ವುದ್ಯಾರ್ಥಿಗಳು ಅಭಿನಯಿಸಿದ ‘ಎಡೆಬಿಡಂಗಿಗಳು’ ಅನ್ನುವ ಹಾಸ್ಯ ನಾಟಕ ಹಾಗೂ ‘ಕೃಷ್ಣಲೀಲೆ-ಕಂಸವಧೆ’ ಯಕ್ಷಗಾನವು ಅತ್ಯಂತ ಪ್ರಬುದ್ಧ ನಟನೆಯಿಂದ ಕೂಡಿದ್ದು ಪ್ರೇಕ್ಷಕರ ಮನಗೆದ್ದಿತು. ವಿದ್ಯಾರ್ಥಿಗಳ ಪೋಷಕರಾದ ಡಾ| ರಾಧಾಕೃಷ್ಣ ಉರಾಳ ಮತ್ತು ತಂಡದವರು ಜನಪದನೃತ್ಯ, ತುಳುನಾಡಿನ ಭೂತಾರಾಧನೆ, ಮತ್ತು ಯಕ್ಷಗಾನವನ್ನೊಳಗೊಂಡ ವಿಶಿಷ್ಟ ನಾಟ್ಯ ಕಾರ್ಯಕ್ರಮ ಹಾಗೂ ದೇವಿ ಮಹಾತ್ಮೆ ಯಕ್ಷರೂಪಕವನ್ನು ಪ್ರಸ್ತುತಪಡಿಸಿದರು. ಶಿಬಿರಾರ್ಥಿಗಳ ಪೋಷಕರು, ವೇದ ವಿದ್ವಾಂಸರು, ಯೋಗ ಗುರುಗಳು ಯಕ್ಷಗಾನ ಮತ್ತು ರಂಗಭೂಮಿಯ ಹಲವು ಕಲಾವಿದರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಬಿರದ ನಿಲಯ ಅಧ್ಯಾಪಕಿ ಶ್ರೀಮತಿ ಶ್ರೀದೇವಿ ನಾಗರಾಜ ಭಟ್ ಹಾಗೂ ಯೋಗಗುರು ನಾಗರಾಜ ರಾವ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಶಿಬಿರದ ರೂವಾರಿಗಳಾದ ಬ್ರಹ್ಮಶ್ರೀ ವೇ| ಮೂ| ಪುರೋಹಿತ ನಾಗರಾಜ ಭಟ್ ಸ್ವಾಗತಿಸಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.