ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಸಿ.ಇ.ಟಿ. ಮೂಲಕ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ

Advt_Headding_Middle
Advt_Headding_Middle

ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಿ.ಇ.ಟಿ. ಮೂಲಕ ಪ್ರವೇಶಾತಿ ಪಡೆಯುವ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.೨ ರ ಬಡ್ಡಿ ದರದಲ್ಲಿ ವಾರ್ಷಿಕವಾಗಿ ಗರಿಷ್ಠ ರೂ. ೧.೦೦ ಲಕ್ಷಗಳವರೆಗೆ ಸಾಲ ಮಂಜೂರು ಮಾಡಲಾಗುತ್ತದೆ.
೨೦೧೮-೧೯ ನೇ ಸಾಲಿನಲ್ಲಿ ಸಿ.ಇ.ಟಿ ಮೂಲಕ ಆಯ್ಕೆಯಾಗಿ ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಿ.ಇ.ಟಿ.ಗೆ ಪಾವತಿಸಬೇಕಾದ ಶುಲ್ಕವನ್ನು ಸಿ.ಇ.ಟಿ. ಯಿಂದ ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೊಂದಾಣಿಕೆ ಮಾಡಲಾಗುತ್ತದೆ.
೨೦೧೮-೧೯ ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ಸಿ.ಇ.ಟಿ. ಮೂಲಕ ಸೀಟು ಪಡೆದು ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಲು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಪಡೆಯಬಯಸುವ ಹಿಂದುಳಿದ ವರ್ಗಗಳ ಪ್ರ-೧, ಪ್ರ-೨ಎ, ಪ್ರ-೩ಎ ಮತ್ತು ಪ್ರ-೩ಬಿ ಗೆ ಸೇರಿದ್ದು, (ವಿಶ್ವಕರ್ಮ ಮತ್ತು ಉಪಜಾತಿಗಳು, ಅಲ್ಪ ಸಂಖ್ಯಾತರು ಮತ್ತು ಉಪಜಾತಿಗಳು, ಉಪ್ಪಾರ ಮತ್ತು ಉಪಜಾತಿಗಳು ಹಾಗೂ ಬೆಸ್ತ/ಅಂಬಿಗ ಮತ್ತು ಅದರ ಉಪಜಾತಿಗಳನ್ನು ಹೊರತುಪಡಿಸಿ) ವಿದ್ಯಾರ್ಥಿ ಮತ್ತು ಕುಟುಂಬದ ವಾರ್ಷಿ ವರಮಾನ ರೂ. ೩.೫೦ ಲಕ್ಷಗಳ ಮಿತಿಯಲ್ಲಿ ಇರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ.
ಸಾಲ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವೆಬ್‌ಸೈಟ್ www.karnataka.gov.in/dbcdc ರಲ್ಲಿ ಲಾಗಿನ್ ಆಗಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ Username   infra\dbcdcarivu   ಮತ್ತು Password   DB(d#098   ನ್ನು ನಮೂದಿಸಿ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಭರ್ತಿಮಾಡುವುದು. ಈ ಕೆಳಕಂಡ ದಾಖಲೆಗಳನ್ನು ಮಾಡಿ ಅರ್ಜಿಯೊಂದಿಗೆ ಆಲ್‌ಲೈನ್‌ನಲ್ಲಿ ದಿ. ೮-೬-೨೦೧೮ ರೊಳಗೆ ಸಲ್ಲಿಸಬೇಕು. ವಿದ್ಯಾರ್ಥಿಯು ಒಂದೇ ಜಿಲ್ಲೆಯಲ್ಲಿ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಹೆಚ್ಚಿನ ಜಿಲ್ಲೆಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರೇಡಿಯೋ ಪಾರ್ಕ್ ಬಳಿ, ಉರ್ವಸ್ಟೋರ್, ಮಂಗಳೂರು ಕಛೇರಿಯನ್ನು ಸಂಪರ್ಕಿಸುವುದು.

ಅರ್ಜಿಯೊಂದಿಗೆ SCAN ಮಾಡಿ ಸಲ್ಲಿಸಬೇಕಾದ ದಾಖಲೆಗಳು:

೧. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
೨. ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ
೩. ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ
೪. ಎಸ್.ಎಸ್.ಎಲ್.ಸಿ. ಅಂಕಪಟ್ಟಿ
೫. ಸಿ.ಇ.ಟಿ/ನೀಟ್ ಪ್ರವೇಶ ಪರೀಕ್ಷೆ ಅಡ್ಮಿಷನ್ ಟಿಕೆಟ್.
ಜಿಲ್ಲಾ ವ್ಯವಸ್ಥಾಪಕರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.