Breaking News

ರಾಜೀನಾಮೆ ಸಲ್ಲಿಸಿದ ಮುಖ್ಯಮಂತ್ರಿ ಬಿ. ಎಸ್. ವೈ

Advt_Headding_Middle
Advt_Headding_Middle


ಸುಳ್ಯ: ಮೇ17 ರ ಬೆಳಗ್ಗೆ 9.30 ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಬಿ.ಎಸ್. ಯಡಿಯೂರಪ್ಪ ಅವರು ತಾವು ರಾಜೀನಾಮೆ ನೀಡುತ್ತಿರುವುದಾಗಿ ಶನಿವಾರ ಸಂಜೆ ೪ ಗಂಟೆಗೆ ಹೊತ್ತಿಗೆ ಘೋಷಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವಾಸ ಮತಯಾಚನೆ ನಾಟಕೀಯ ತಿರುವು ಪಡೆದುಕೊಂಡಿದ್ದು, ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆಯೊಂದಿಗೆ ಕೊನೆಗೊಂಡಿದೆ. ಸದನದಲ್ಲಿ ವಿಶ್ವಾಸಮತಯಾಚನೆ ಪ್ರಸ್ತಾಪ ಮಂಡಿಸಿದ ಬಿ.ಎಸ್.ವೈ ಸುಮಾರು 15 ನಿಮಿಷಗಳ ಕಾಲ ಭಾಷಣ ಮಾಡಿದ್ದು, ಬದುಕಿನ ಕೊನೆ ಉಸಿರಿರುವವರೆಗೆ ರಾಜ್ಯದಲ್ಲಿ ಅನ್ನದಾತ ನೆಮ್ಮದಿಯಿಂದ ಬದುಕಬೇಕಾಗಿದೆ. ಕಳೆದ ಐದು ವರ್ಷಗಳಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದೇನೆ. ರಾಜ್ಯದ ಜನರ ಸೇವೆ ಮಾಡಬೇಕು, ರೈತರನ್ನು ಉಳಿಸಬೇಕು ಎನ್ನುವ ಹಂಬಲ ನನ್ನಲ್ಲಿದೆ ಎಂದಿದ್ದು, ಪ್ರಾಮಾಣಿಕರ ಕೊರತೆಯಿಂದ ನಮ್ಮ ನಾಡು ಅಭಿವೃದ್ಧಿಯಾಗಿಲ್ಲ.

ರಾಜ್ಯದ ಜನ ಒಂದು ಕ್ಷಣ ಆಲೋಚಿಸಿ 113 ಸ್ಥಾನಗಳನ್ನು ನಮಗೆ ನೀಡಿದ್ದರೆ ರಾಜ್ಯದ ಚಿತ್ರಣವೇ ಬದಲಾಗುತ್ತಿತ್ತು. ಮುಂದಿನ ಬಾರಿ 150 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಶಾಸಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ಪ್ರಜಾಪ್ರಭುತ್ವದ, ಸಂವಿಧಾನದ ಮತ್ತು ಕಾನೂನಿನ ವಿಜಯ ಎಂದು ಹೇಳಿದ್ದಾರೆ. ವಿಧಾನ ಸಭಾ ಅಧಿವೇಶನದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ಸುಳ್ಯ ಶಾಸಕ ಅಂಗಾರ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.