ಮೇ-26-27: ಕಲ್ಲೆಂಬಿ ವಯನಾಟ್ ಕುಲವನ್ ದೈವಸ್ಥಾನದ ಪ್ರತಿಷ್ಠಾ ಮಹೋತ್ಸವ

Advt_Headding_Middle
Advt_Headding_Middle


ಆಲೆಟ್ಟಿ ಗ್ರಾಮದ ಕಲ್ಲೆಂಬಿ ಮನೆತನದ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವವು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಮತ್ತು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಯವರ ಆಶೀರ್ವಾದದೊಂದಿಗೆ ಕುತ್ತಿಕೋಲು ತಂಬುರಾಟ್ಟಿ ಭಗವತೀ ಕ್ಷೇತ್ರದ ಪೂಜ್ಯ ಸ್ಥಾನಿಕರ ನೇತೃತ್ವದಲ್ಲಿ ಮೇ.೨೬ ಮತ್ತು ೨೭ ರಂದು ನಡೆಯಲಿರುವುದು.
ಮೆ.೨೬ ರ ಬೆಳಗ್ಗೆ ಉಗ್ರಾಣ ತುಂಬಿಸಿ ರಾತ್ರಿ ವಾಸ್ತು ಶಿಲ್ಪಿ ಟಿ.ವಿ.ಶಶಿಧರನ್ ಚಾಲಿಂಗಾಲ್ ರವರಿಂದ ಕುತ್ತಿ ಪೂಜೆ ನಡೆಯಲಿರುವುದು. ಮರುದಿನ ಪ್ರಾತ:ಕಾಲ ಗಣಪತಿ ಹವನ ವಾದ ಬಳಿಕ ಗಂಟೆ ೧೧.೪೫ ರಿಂದ ೧೨.೩೦ ರ ಮುಹೂರ್ತದಲ್ಲಿ ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ವಯನಾಟ್ ಕುಲವನ್ ದೈವದ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಾಂiiಕ್ರಮವು ಶ್ರೀ ದೈವಗಳ ದರ್ಶನಕಾರರಾದ ಅಡ್ಪಂಗಾಯ ಭಾಸ್ಕರನ್ ಮತ್ತು ಆನಂದನ್ ರವರ ಸಮ್ಮುಖದಲ್ಲಿ ನಡೆಯಲಿರುವುದು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯಾಗಿ ಅದೇ ದಿನ ರಾತ್ರಿ ದೈವಸ್ಥಾನದಲ್ಲಿ ಪುದಿಯೋಡ್ಕಲ್ (ಮರೋಟ್) ಕಾರ್ಯಕ್ರಮವು ನಡೆದು ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಾಗಲಿರುವುದು ಎಂದು ಆಡಳಿತದಾರರಾದ ಕಲ್ಲೆಂಬಿ ಮಾಧವ ಗೌಡ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.