Breaking News

ವಾಸ್ತವ್ಯ ಪ್ರಮಾಣ ಪತ್ರ ನೀಡದೆ ಸತಾಯುಸುತ್ತಿರುವ ಆರೋಪ : ನ.ಪಂ ಅಧಿಕಾರಿ ಗಳ ವಿರುದ್ಧ ಆಕ್ರೋಶ.

Advt_Headding_Middle
Advt_Headding_Middle

ಜಟ್ಟಿಪಳ್ಳದ ವ್ಯಕ್ತಿ ಯೊಬ್ಬರು ವಾಸ್ತವ್ಯ ಪ್ರಮಾಣ ಪತ್ರಕ್ಕಾಗಿ ಎರಡು ದಿನದಿಂದ ನ.ಪಂ ಕಚೇರಿ ಗೆ ಬಂದರೂ ಅವರಿಗೆ ಪ್ರಮಾಣ ಪತ್ರ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆಂದು ಆರೋಪಿಸಿ ಜಟ್ಟಿಪಳ್ಳದ ಯುವರು ನ.ಪಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಜಟ್ಟಿಪಳ್ಳದ ಮಹಮ್ಮದ್ ಎಂಬವರು ವಾಸ್ತವ್ಯ ಪ್ರಮಾಣ ಪತ್ರ ಕ್ಕಾಗಿ ಏ.19ರಂದು ನ.ಪಂಗೆ ಅರ್ಜಿ ಸಲ್ಲಿಸಿದ್ದರು ಆದರೆ ಅಂದು ಪ್ರಮಾಣ ಪತ್ರ ನೀಡದೆ ಸೋಮವಾರ ಬರುವಂತೆ ಹೇಳಿದರೆನ್ನಲಾಗಿದೆ. ಮೇ 21 ಸೋಮವಾರ ಹೋದಾಗ ಮುಖ್ಯಾಧಿಕಾರಿ ಇರಲಿಲ್ಲ. ಪ್ರಮಾಣ ಪತ್ರ ವೂ ಆಗಿರಲಿಲ್ಲ. ಇದರಿಂದ ಆಕ್ರೋಶ ಗೊಂಡ ಮಹಮ್ಮದ್ ರ ಜತೆಗಿದ್ದ ರಶೀದ್ ಜಟ್ಟಿಪಳ್ಳ ಮತ್ತಿತರ ಯುವಕರು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿ ಗಳಿಗೆ ಫೋನಾಯಿಸಿ ಕೇಳಿದಾಗ ಮಂಗಳೂರಿನ ಲ್ಲಿ ಇರುವುದಾಗಿ ಹೇಳಿದರೆನ್ನಲಾಗಿದೆ.೧ ಗಂಟೆ ಯಲ್ಲಿ ಆಗಬೇಕಾದ ಕೆಲಸಕ್ಕೆ ಸಾರ್ವಜನಿಕ ರನ್ನು ಹೀಗೆ ಅಲೆದಾಡಿಸುವ ಕ್ರಮ ಸರಿಯಲ್ಲ ಎಂದು ರಶೀದ್ ಜಟ್ಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.