ವಿಘ್ನ ಸಂತೋಷದ ಪದ ಬಳಕೆಗೆ ಅಪಾರ್ಥ ಬೇಡ : ಜಯಪ್ರಕಾಶ್ ರೈ ಸ್ಪಷ್ಟನೆ

Advt_Headding_Middle
Advt_Headding_Middle

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಸಂದರ್ಭ ಸುಳ್ಯದಲ್ಲಿ ನಡೆದ ವಿಜಯೋತ್ಸವದ ಕುರಿತ ನನ್ನ ಹೇಳಿಕೆಯಲ್ಲಿ ವಿಘ್ನ ಸಂತೋಷ ಎಂಬ ಶಬ್ದ ಬಳಕೆಯಾಗಿದ್ದು, ಈ ಕುರಿತು ಯಾವುದೇ ಅಪಾರ್ಥ ಬೇಡ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಸ್ಪಷ್ಟನೆ ನೀಡಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ಯಡಿಯೂರಪ್ಪ ರಾಜೀನಾಮೆ ನೀಡಿದ ಸಂದರ್ಭ ವಿಜಯೋತ್ಸವ ನಡೆಸೋಣ ಎಂದು ಕೆಲವರು ಹೇಳಿದ್ದರು. ಈಗ ನಡೆಸಿದರೆ ಅದು ವಿಘ್ನ ಸಂತೋಷ ಆಗುತ್ತದೆ. ಹಾಗಾಗಿ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ವಿಜಯೋತ್ಸವ ನಡೆಸೋಣ ಎಂಬ ಸಲಹೆ ನೀಡಿದ್ದೆ. ಆದರೂ ಕಾರ್ಯಕರ್ತರು ಪಟಾಕಿ ಸಿಡಿಸುತ್ತೇವೆ ಎಂದಾಗ ಸಿಡಿಸಿ ಎಂದು ಹೇಳಿದ್ದೆ. ಸುಳ್ಯ ಬಸ್ ನಿಲ್ದಾಣದ ಬಳಿ ವಿಜಯೋತ್ಸವವನ್ನು ಕೂಡಾ ಕೆಲವರು ನಡೆಸಿದರು. ಈ ಕುರಿತಂತೆ ನನ್ನ ಭಾವನೆ ಪತ್ರಿಕೆಗಳಲ್ಲಿ ಬರುವಾಗ ವಿಘ್ನ ಸಂತೋಷ ಎಂಬ ಪದ ಅಪಾರ್ಥಕ್ಕೊಳಗಾಗಿದೆ. ವಿಜಯೋತ್ಸವ ನಡೆಸಿದವರು ವಿಘ್ನ ಸಂತೋಷಿಗಳು ಎಂದು ನಾನು ಹೇಳಿರುವುದಾಗಿ ವೆಂಕಪ್ಪ ಗೌಡರು ಬೇಸರ ಮಾಡಿಕೊಂಡಿದ್ದಾರೆ. ಈ ಕುರಿತು ಇಂದು ನಡೆದ ಸಭೆಯಲ್ಲಿ ಅವರ ಸಮ್ಮುಖದಲ್ಲಿಯೇ ಚರ್ಚೆ ನಡೆಸಿ ಸ್ಪಷ್ಟನೆ ನೀಡಲಾಗಿದೆ. ಕಾಂಗ್ರೆಸ್ ನಾಯಕರನ್ನು ಮತ್ತು ಕಾಯಕರ್ತರನ್ನು ವಿಘ್ನ ಸಂತೋಷಿಗಳು ಎಂದು ಕರೆಯುವಂತಹ ಅಧ್ಯಕ್ಷ ನಾನಲ್ಲ. ಹೀಗಾಗಿ ಈ ಕುರಿತು ಯಾವುದೇ ಅಪಾರ್ಥ ಬೇಡ ಎಂದವರು ಹೇಳಿದರು
ವೆಂಕಪ್ಪ ಗೌಡರ ಅದ್ಯಕ್ಷತೆ ಬದಲಾಯಿಸಿದ ಕಾರಣದಿಂದ ಇಷ್ಟು ದೊಡ್ಡ ಅಂತರದ ಸೋಲಾಯಿತು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಹೇಳಲಾದ ಪ್ರಶ್ನೆಗೆ ಉತ್ತರಿಸಿದ ಜಯಪ್ರಕಾಶ್ ರೈ ಅವರು, ಈ ವಿಚಾರ ಕೂಡಾ ಇವತ್ತಿನ ಸಭೆಯಲ್ಲಿ ಚರ್ಚಿಸಿದ್ದೇವೆ. ಇನ್ನು ಮುಂದೆ ಪಕ್ಷದ ಕುರಿತಂತೆ ಯಾರು ಕೂಡಾ ಈ ರೀತಿಯ ಚರ್ಚೆಯನ್ನು ಬಹಿರಂಗವಾಗಿ ಮತ್ತು ಮಾಧ್ಯಮಗಳಲ್ಲಿ ಚರ್ಚೆ ಮಾಡಬಾರದೆಣಬ ನಿರ್ಣಯ ಕೈಗೊಡಿದ್ದೇವೆ. ಈ ರೀತಿಯ ಅಭಿಪ್ರಾಯ ಸರಿಯಲ್ಲ. ಕಳೆದ ಬಾರಿ ೧೫೦೦ ಅಂತರ ಬಂದಿದೆ. ಆ ಬಳಿಕ ಲೋಕಸಭಾ ಚುನಾವಣೆಯಲ್ಲಿ ೩೩೦೦೦ ಅಂತರವಿತ್ತು. ಈಗ ೨೬೦೦೦ ಬಂದಿದೆ. ಇದೆಲ್ಲ ಅಧ್ಯಕ್ಷರ ಕಾರಣದಿಂದ ಆಗುವುದಲ್ಲ. ಅಂತರ ಜಾಸ್ತಿಯಾದರೂ ಕಡಿಮೆಯಾದರೂ ಅದಕ್ಕೆ ಎಲ್ಲರೂ ಜವಾಬ್ದಾರಿ ಎಂದು ಹೇಳಿದರು. ಯಾವುದೇ ಫಲಿತಾಂಶ ಒಬ್ಬ ವ್ಯಕ್ತಿಯಿಂದ ನಿರ್ಮಾಣವಾಗುವುದಿಲ್ಲ ಎಂದು ಭರತ್ ಮುಂಡೋಡಿ ಹೇಳಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಾಗದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಈ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಗಿದೆ ಎಂದು ಜಯಪ್ರಕಾಶ್ ರೈ ಹೇಳಿದರೆ, ಯಾವುದೆ ಕಾರಣಕ್ಕೂ ಇದು ಬೇಡ ಎಂದು ನಾವೆಲ್ಲಾ ಹೇಳಿದ್ದೇವೆ ಎಂದು ಭರತ್ ಮುಂಡೋಡಿ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.