ಬಿಜೆಪಿಯದು ಹಿಂದುತ್ವವಲ್ಲ, ಪರಧರ್ಮ ವಿರೋಧ : ಭರತ್ ಮುಂಡೋಡಿ

Advt_Headding_Middle
Advt_Headding_Middle
Advt_Headding_Middle

ಹಿಂದುತ್ವದ ಕಾರಣಕ್ಕೆ ಕಾಂಗ್ರೆಸ್‌ಗೆ ಸೋಲಾಗಿದೆ ಎಂದು ಹೇಳುವುದು ಸರಿಯಾಗುವುದಿಲ್ಲ. ಯಾಕೆಂದರೆ ಬಿಜೆಪಿಯವರದು ನಿಜವಾದ ಹಿಂದುತ್ವವಲ್ಲ. ಅವರದು ಪರಧರ್ಮ ವಿರೋಧ. ಇದನ್ನು ಚುನಾವಣೆಯಲ್ಲಿ ಬಳಕೆ ಮಾಡಿ ಗೆದ್ದಿದ್ದಾರೆ. ಆದರೆ ನಾವು ಮುಂದಿನ ದಿನಗಳಲ್ಲಿ ನಿಜವಾದ ಹಿಂದುತ್ವ ಯಾವುದೆಂದು ತಿಳಿ ಹೇಳುವ ಪ್ರಯತ್ನ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ ಹೇಳಿದರು
ಸುಳ್ಯದಲ್ಲಿ ಕಾಂಗ್ರೆಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷವಿರುವುದರಿಂದ ಅಭಿವೃದ್ಧಿಗೆ ತೊಡಕಿಲ್ಲ. ಅಭಿವೃದ್ದಿಯ ನಿಟ್ಟಿನಲ್ಲಿ ಇಲ್ಲಿ ಸಮನ್ವಯ ಸಮಿತಿಯೊಂದನ್ನು ಮಾಡಿ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗುವುದು. ಕಳೆದ ಬಾರಿ ಈ ಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳು ನಡೆದಿದೆ ಎಂದು ಅಂಗಾರರು ಹೇಳಿದ್ದರು. ಆಗಲೂ ಇಲ್ಲಿ ಬಿಜೆಪಿ ಸರ್ಕಾರವಿರಲಿಲ್ಲ ಎಂದರಲ್ಲದೆ, ೧೧೦ ಕೆವಿ ಸಬ್‌ಸ್ಟೇಷನ್ ಅನುಷ್ಠಾನಕ್ಕೆ ನಮ್ಮ ವತಿಯಿಂದ ಪೂರ್ಣ ಪ್ರಯತ್ನ ಮಾಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಪಕ್ಷದಿಂದ ಸ್ಥಾನಮಾನಗಳು ನೀಡುವಾಗ ಸಕ್ರಿಯವಾಗಿ ಕೆಲಸ ಮಾಡುವ ಮತ್ತು ನಿಷ್ಠಾವಂತರನ್ನು ಗುರುತಿಸಬೇಕು ಎಂಬ ವಿಚಾರ ಇಂದಿನ ಸಭೆಯಲ್ಲಿ ಚರ್ಚೆಗೆ ಬಂದಿದೆ. ಪಕ್ಷದಲ್ಲಿ ದುಡಿಯದವರಿಗೆ ಸ್ಥಾನ ಮಾನ ನೀಡಿದರೆ ನಾವು ಕೂಡಾ ಮಾಡುತ್ತೇವೆ ಎಂದು ಭರತ್ ಮುಂಡೋಡಿ ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.