ಸುಳ್ಯ ಎಸ್‌ಐ ಪರವಾಗಿ ನಿಲ್ಲುತ್ತೇವೆ : ಜಯಪ್ರಕಾಶ್ ರೈ, ಭರತ್ ಮುಂಡೋಡಿ

Advt_Headding_Middle
Advt_Headding_Middle

ಸುಳ್ಯ ಎಸ್‌ಐ ಮಂಜುನಾಥ್ ಮತ್ತು ಬೆಳ್ಳಾರೆ ಎಸ್‌ಐ ಈರಯ್ಯರವರು ನಿಸ್ಪಕ್ಷಪಾತ ಮತ್ತು ದಕ್ಷ ಅಧಿಕಾರಿಗಳಾಗಿದ್ದು ಕಾಂಗ್ರೆಸ್ ಅವರ ಪರವಾಗಿಯೂ ನಿಲ್ಲಲಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಜಯಪ್ರಕಾಶ್ ರೈ ಹಾಗೂ ಕೆಪಿಸಿಸ ಕಾರ್ಯದರ್ಶಿ ಭರತ್ ಮುಂಡೋಡಿ ಹೇಳಿದ್ದಾರೆ.
ಸುಳ್ಯದಲ್ಲಿ ಕಾಂಗ್ರೆಸ್ ಪತ್ರಿಕಾಗೋಷ್ಠಿ ವೇಳೆ ಪತ್ರಕರ್ತರು, ಸುಳ್ಯ ಎಸ್‌ಐ ಮೇಲೆ ಕ್ರಮಕ್ಕೆ ಬಿಜೆಪಿ ಆಗ್ರಹಿಸುತ್ತಿರುವ ಕುರಿತಂತೆ ಗಮನ ಸೆಳೆದಾಗ, ಸುಳ್ಯದ ಚರಿತ್ರೆಯಲ್ಲೇ ಚುನಾವಣೆಯನ್ನು ಯಾವುದೇ ಘರ್ಷಣೆ ಇಲ್ಲದೆ ನಡೆಸಿದ ಕೀರ್ತಿ ಸುಳ್ಯ ಎಸ್‌ಐ ಮಂಜುನಾಥ್ ಮತ್ತು ಬೆಳ್ಳಾರೆ ಎಸ್‌ಐ ಈರಯ್ಯರಿಗೆ ಸಲ್ಲುತ್ತದೆ ಎಂದು ಜಯಪ್ರಕಾಶ್ ರೈ ಹೇಳಿದರು. ಈ ಇಬ್ಬರು ಅಧಿಕಾರಿಗಳು ನಿಸ್ಪಕ್ಷಪಾತವಾಗಿದ್ದರು. ನಮ್ಮ ಸಭೆಗಳಿಗೂ ಬಂದು ಪ್ರಶ್ನಿಸುತ್ತಿದ್ದರು. ಇಂಥ ಅಧಿಕಾರಿಗಳ ನೈತಿಕತೆಯನ್ನು ಪ್ರಶ್ನಿಸಿದಾಗ ಅವರ ಕರ್ತವ್ಯ ಪಾಲನೆಯಲ್ಲಿ ಅಡ್ಡಿಯುಂಟಾಗುತ್ತದೆ. ಹೀಗಾಗಿ ನಾವು ಆ ಅಧಿಕಾರಿಗಳ ಪರ ನಿಲ್ಲುತ್ತೇವೆ ಎಂದು ಭರತ್ ಮುಂಡೋಡಿ ಹೇಳಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.