ಮುರುಳ್ಯ : ಕಾಳಿಕಾ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಸಮಲೋಚನಾ ಸಭೆ

Advt_Headding_Middle
Advt_Headding_Middle

ಮುರುಳ್ಯ : ಋಷಿ ಮುನಿಗಳು ತಪಸ್ಸು ಮಾಡಿದ ಕುಕ್ಕಟ್ಟೆ ಮುರುಳ್ಯ ಕಾಳಿಕ ಪರಮೇಶ್ವರಿ ದೇವಸ್ಥಾನವು ಅನುವಂಶಿಕ ಮೊಕ್ತೆಶರಾದ ಜನಾರ್ಧನ ಆಚಾರ್ಯರು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ದೇವಸ್ಥಾನವು ಅಜೀರ್ಣವ್ಯವಸ್ಥೆಯಲ್ಲಿದ್ದು ಊರ ಹತ್ತು ಸಮಸ್ಥರ ನೆರವಿನಿಂದ ಜೀಣೋದ್ಧಾರಗೊಳ್ಳಲಿದೆ. ಆ ಪ್ರಯುಕ್ತ ಅನುವಂಶಿಕ ಆಡಳಿತ ಮೊಕ್ತೆಶರಾದ ಜನಾರ್ಧನ ಆಚಾರ್ಯರ ಉಪಸ್ಥಿತಿಯಲ್ಲಿ ಮರೋಳಿ ಬಾಲಕೃಷ್ಣ ಆಚಾರ್ಯರ ಅಧ್ಯಕ್ಷತೆಯಲ್ಲಿ ಮೇ.೨೩ರಂದು ಊರವರು ಸೇರಿ ಸಮಲೋಚನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಜೀಣೋದ್ಧಾರ ಸಮಿತಿ ಕಾರ‍್ಯದರ್ಶಿ ಪುರುಷೋತ್ತಮ ಆಚಾರ್ಯ ಕುಕ್ಕಟೆ, ಸದಸ್ಯರಾದ ಚಿನ್ನಯ್ಯ ಆಚಾರ್ಯ, ಉಪಾಧ್ಯಕ್ಷರಾದ ವಸಂತ ನಡುಬೈಲು, ನೀಲಮ್ಮ ಹುದೇರಿ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ಚಂದ್ರ ಆಚಾರ್ಯ ಇಳಂತಿಲ, ಆಡಳಿತ ಸಮಿತಿ ಸದಸ್ಯಾರ ದನಂಜಯ ಆಚಾರ್ಯ ಏನೆಕಲ್ಲು, ಜೀರ್ಣೊದ್ಧಾರ ಸಮಿತಿ ಸದಸ್ಯರಾದ ವಿಟ್ಲ ಕೃಷ್ಣ ಆಚಾರ್ಯ, ಇಂದ್ರಾಜೆ ಕೃಷ್ಣಯ್ಯ ಆಚಾರ್ಯ, ಸುಬ್ರಹ್ಮಣ್ಯ ಬಾಸ್ಕರ ಆಚಾರ್ಯ , ಅಲೆಕ್ಕಾಡಿಯ ಬಾಸ್ಕರ ಆಚಾರ್ಯ, ಮರಕ್ಕಡದ ಸೀತಾರಾಮ ಆಚಾರ್ಯ, ಎಣ್ಮೂರು ವಿವೇಕ್ ಆರ್ಟ್ಸ್ ಮಾಲಕ ರಮೇಶ್ ಆಚಾರ್ಯ, ಕುಳಾಯಿ ಯು. ಬಾಲಕೃಷ್ಣ ಪುರೋಹಿತರು, ಬೊಂಬಾಯಿಯ ಗೋಪಾಲಕೃಷ್ಣ ಆಚಾರ್ಯ ಮೊದಲಾದ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.