ಲ| ರೇಣುಕಾ ಸದಾನಂದ ಜಾಕೆಯವರಿಗೆ ಲಯನ್ಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ ಪ್ರಶಸ್ತಿ

Advt_Headding_Middle
Advt_Headding_Middle

2016-17 ನೇ ಸಾಲಿನ ಸುಳ್ಯ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿದ್ದ ಎಂ.ಜೆ.ಎಫ್. ಲಯನ್ ರೇಣುಕಾ ಸದಾನಂದ ಜಾಕೆಯವರ ಅಧ್ಯಕ್ಷತೆಯಲ್ಲಿ ಸುಳ್ಯ ಲಯನ್ಸ್ ಸಂಸ್ಥೆ ಸೇವಾ ಚಟುವಟಿಕೆಗಳಲ್ಲಿ ಲಯನ್ಸ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿತ್ತು. ಈ ಸೇವೆಯನ್ನು ಗುರುತಿಸಿ ಮೇ. 20 ರಂದು ಬೆಂಗಳೂರಿನ ರೋಯಲ್ ಆರ್ಕೆಡ್ ರೆಸಾರ್ಟ್ ಅಲ್ಲಲ್‌ಸಂದ್ರದಲ್ಲಿ ಜರುಗಿದ ಲಯನ್ಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ ಸಮ್ಮೇಳನದಲ್ಲಿ “ಬೆಸ್ಟ್ ಪ್ರೆಸಿಡೆಂಟ್ ಇನ್ ಸರ್ವೀಸ್” ಪ್ರಸಸ್ತಿಯನ್ನು 2016-17 ನೇ ಸಾಲಿನ ಮಲ್ಟಿಪಲ್ ಕೌನ್ಸಿಲ್ ಚೇರ್‌ಮೇನ್ ಲ| ಆಗ್ನೆಲ್ಲೊ ಎಲ್‌ಕೋಸಸ್‌ರವರಿಂದ ಲ| ರೇಣುಕಾ ಸದಾನಂದ ಜಾಕೆಯವರು ಪಡೆದರು.


ಈ ಸಂದರ್ಭದಲ್ಲಿ ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಚೇರ್‌ಮೇನ್ ಲ| ಭಾರತಿ ನಾಗೇಶ್ ಲಯನ್ಸ್ ಜಿಲ್ಲಾ ಗವರ್ನರ್ ಲ| ಹೆಚ್. ಆರ್. ಹರೀಶ್ ನಿಯೋಜಿತ ರಾಜ್ಯಪಾಲರಾದ ಲ| ದೇವದಾಸ್ ಭಂಡಾರಿ, ಪ್ರಥಮ ಉಪ ರಾಜ್ಯಪಾಲರಾದ ಲ| ರೋನಾಲ್ಡ್ ಐಸಾಕ್ ಗೋಮ್ಸ್, ದ್ವಿತೀಯ ಉಪರಾಜ್ಯಪಾಲರಾದ ಲ| ಡಾ| ಗೀತಪ್ರಕಾಶ್ ಉಪಸ್ಥಿತರಿದ್ದರು.
ಈ ಹಿಂದೆ 201-02 ನೇ ಸಾಲಿನಲ್ಲಿ ಸುಳ್ಯ ಲಯನೆಸ್ ಕ್ಲಬ್‌ನ ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಮತ್ತು 2004-05 ರಲ್ಲಿ ಲಯನೆಸ್ ಜಿಲ್ಲಾ ಕೋ-ಆರ್ಡಿನೇಟರ್ ಆಗಿದ್ದ ಸಂದರ್ಭದಲ್ಲೂ ಲ| ರೇಣುಕಾ ಸದಾನಂದ ಜಾಕೆಯವರು ಮಲ್ಟಿಪಲ್ ಡಿಸ್ಟ್ರಿಕ್ಟ್ ಪ್ರಶಸ್ತಿಯನ್ನು ಪಡೆದಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.