Breaking News

ಮಕ್ಕಳ ಕಳ್ಳತನ ವದಂತಿ : ಬೆಳ್ಳಾರೆ ಎಸ್.ಐ. ಈರಯ್ಯರವರಿಂದ ಜಾಗೃತಿ

Advt_Headding_Middle
Advt_Headding_Middle


ಮಕ್ಕಳ ಅಪಹರಣ ಮಾಡಲಾಗುತ್ತಿದೆ ಎಂದು ಮೆಸೇಜ್, ವಿಡಿಯೋ, ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿ ವದಂತಿಗೆ ಕಾರಣವಾಗುತ್ತಿರುವ ವಿರುದ್ಧ ಬೆಳ್ಳಾರೆ ಎಸ್.ಐ. ಈರಯ್ಯರವರು ಸಾಮಾಜಿಕ ಜಾಲತಾಣದಲ್ಲಿಯೇ ಜಾಗೃತಿ ಮೂಡಿಸುತ್ತಿದ್ದಾರೆ.
ಈ ವದಂತಿಯ ವಿರುದ್ಧ ಜಾಗೃತಿ ಮೂಡುವ ಸಂದೇಶವೊಂದನ್ನು ವಾಟ್ಸಾಫ್ ಗ್ರೂಪ್‌ಗಳಲ್ಲಿ ಅವರು ಹರಿಯಬಿಡುತ್ತಿದ್ದಾರೆ.
ಆ ಸಂದೇಶ ಇಂತಿದೆ- “ಬೆಳ್ಳಾರೆ ಪೋಲಿಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಡಿ ಎನ್ ಈರಯ್ಯ ಆದ ನಾನು ನಮ್ಮ ಪೋಲಿಸ್ ಠಾಣೆ ವ್ಯಾಪ್ತಿಯ ಎಲ್ಲಾ ಗೌರವಾನ್ವಿತ ಗ್ರಾಮದ ಸದಸ್ಯರುಗಳಿಗೆ ಈ ಸಂದೇಶದ ಮೂಲಕ ತಮ್ಮ ಲ್ಲಿ ತಿಳಿಸುವುದೇನೆಂದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ ಆಪ್ ನಲ್ಲಿ ಪ್ರಸ್ತಾರಗೊಳ್ಳುತ್ತಿರುವ ಮಕ್ಕಳ ಅಪಹರಣದ ಬಗೆಗಿನ ವೀಡಿಯೋ ಕ್ಲಿಪ್ ಗಳು ಹಾಗೂ ಸಂದೇಶಗಳು ಸುಳ್ಳಾಗಿದ್ದೂ, ಅನಪೇಕ್ಷಣೀಯವಾಗಿರುತ್ತವೆ. ಆದುದರಿಂದ ತಾವುಗಳು ಇಂತಹ ದುಷ್ಪ್ರಚೋಧನಾಕಾರಿಯಾದಂತಹ ಉಹಾಪೋಹಗಳಿಗೆ,ಸಂದೇಶಗಳಿಗೆ ಕಿವಿಗೊಡದೆ ಮತ್ತು ಈ ರೀತಿಯ ಉದ್ದೇಶ ಕ್ಕಾಗಿ ತಮ್ಮ ಗ್ರಾಮಗಳಲ್ಲಿ ಗಮನಕ್ಕೆ ಬಂದ ಅಪರಿಚಿತ ಅಥವಾ ಅನುಮಾನಸ್ಪದ ವ್ಯಕ್ತಿಯು ಕಂಡುಬಂದರೆ ಅವರ ಮೇಲೆ ಹಲ್ಲೆ ಮಾಡುವುದಾಗಲಿ ಅಥವಾ ಮತ್ಯಾವುದೇ ಕೃತ್ಯಕ್ಕೆ ಮುಂದಾಗದೇ ದಯವಿಟ್ಟು ನಮ್ಮ ಠಾಣ ದೂರವಾಣಿ ಸಂಖ್ಯೆ ೨೭೧೯೯೫ ಮತ್ತು ನನ್ನ ಮೊಬೈಲ್ ನಂ ೯೮೪೩೦೫೩೯೦೧ ಕ್ಕೆ ಕರೆ ಮಾಡುವ ಮೂಲಕ ತಿಳಿಸುವ ಮೂಲಕ ನಮ್ಮೊಡನೆ ಸಹಕರಿಸಲು ಮನವಿ. ಹಾಗೂ ಮಕ್ಕಳ ಅಪಹರಣ ಸುದ್ದಿ ಯು ಸಂಪೂರ್ಣವಾಗಿ ಸುಳ್ಳು ಸುದ್ದಿಯಾಗಿದ್ದೂ, ಇದಕ್ಕೆ ಸಂಬಂಧಿಸಿದಂತೆ ನಮ್ಮ ಇಡೀ ಜಿಲ್ಲಾ ವ್ಯಾಪ್ತಿಯ ಯಾವುದೇ ಠಾಣೆಯಲ್ಲಿ ಒಂದು ಪ್ರಕರಣ ವು ದಾಖಲಾಗಿರುವುದಿಲ್ಲ. ಆದುದರಿಂದ ಇಂತಹ ಸುಳ್ಳು ಸುದ್ದಿಯನ್ನು ಗಣನೆಗೆ ತೆಗೆದುಕೊಳ್ಳದೇ ಮತ್ತು ಇದರಿಂದ ಮಕ್ಕಳ ಮನಸ್ಸಿನ ಮೇಲೆ ಭಯದ ಭಾವನೆಗೆ ಅವಕಾಶ ಮಾಡಬಾರದು. ಮತ್ತು ಅವರ ಆಟೋಟ ಪಾಠಗಳ ವಿಚಾರವಾಗಿ ಅವರ ಸ್ವತಂತ್ರ ವನ್ನು ಕಸಿದುಕೊಳ್ಳಬಾರದೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಮತ್ತು ಈ ಸಂದೇಶವನ್ನು ತಮ್ಮ ಎಲ್ಲಾ ಗ್ರೂಪ್ ಗಳಿಗೆ ಕಳುಹಿಸುವ ಮೂಲಕ ನಮ್ಮ ಬೆಳ್ಳಾರೆ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಯುತ ಪರಿಸರ ನಿರ್ಮಾಣಕ್ಕೆ ತಾವೆಲ್ಲಾ ಒಬ್ಬ ಜವಾಬ್ದಾರಿ ಯುತ ಪ್ರಜೆಯಾಗಿ ವರ್ತಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.”

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.