ಬೀಡಿ ಕಾರ್ಮಿಕರ ವೇತನ ಮತ್ತು ತುಟ್ಟಿಭತ್ಯೆಗೆ ಒತ್ತಾಯಿಸಿ ಪ್ರತಿಭಟನೆ

Advt_Headding_Middle
Advt_Headding_Middle


ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ಬೀಡಿ ಕಾರ್ಮಿಕರಿದ್ದು ಬೀಡಿ ಸುತ್ತಿ ಅದರಿಂದ ಬಂದ ಆದಾಯದಿಂದ ತಮ್ಮ ಕುಟುಂಬ ನಿರ್ವಹಿಸುತ್ತಿದ್ದಾರೆ. ಬೆಲೆ ಏರಿಕೆಯ ಈ ಸಂದರ್ಭದಲ್ಲಿ ಈಗಿನ ವೇತನದಲ್ಲಿ ಜೀವನ ನಡೆಸಲು ಕಷ್ಟವೆಂದು ಪರಿಗಣಿಸಿ ಸಿ ಐ ಟಿ ಯು ಬೀಡಿ ಕಾರ್ಮಿಕರ ವೇತನ ಹೆಚ್ಚಳಕ್ಕಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು ಹೋರಾಟಕ್ಕೆ ಸ್ಪಂದಿಸಿದ ಸರಕಾರ ಕಳೆದ ಮಾರ್ಚ್ ೧೪ರಂದು ಗಜೆಟ್ ನೋಟಿಫಿಕೇಶನ್ ಹೊರಡಿಸಿ 2018 ಎಪ್ರಿಲ್ 1 ರಿಂದ ಸಾವಿರ ಬೀಡಿಗೆ 110 ರಂತೆ ಕನಿಷ್ಟ ಕೂಲಿ ಹಾಗೂ ಬೆಲೆ ಏರಿಕೆ ಅನುಗುಣವಾಗಿ ರೂ.10.52 ರಂತೆ ತುಟ್ಟಿಭತ್ಯೆಯನ್ನು ಬೀಡಿ ಮಾಲಿಕರು ನೀಡಬೇಕೆಂದು ಸೂಚಿಸಿದೆ. ಮಾತ್ರವಲ್ಲ ಕಳೆದ 3 ವರ್ಷದ ತುಟ್ಟಿಭತ್ಯೆ ಬಾಕಿ ಇರುವುದನ್ನು ಕೂಡಲೇ ನೀಡಬೇಕೆಂದು ಸಿ ಐ ಟಿ ಯು ಒತ್ತಾಯಿಸಿದ್ದು, ಹೈ ಕೋರ್ಟ್ ಕೂಡ ಕಾರ್ಮಿಕರ ಪರ ಆದೇಶ ನೀಡಿದ್ದು, ಮಾಲಿಕರು ಅದನ್ನು ತಡೆಹಿಡಿದಿದ್ದಾರೆ. ಮಾತ್ರವಲ್ಲ, ಎಪ್ರಿಲ್ ತಿಂಗಳಿನಿಂದ ಸರಕಾರ ನಿಗದಿಗೊಳಿಸಿದ ವೇತನ 222.52 ನ್ನು ನೀಡಲು ನಿರಾಕರಿಸಿದ್ದು ಇದರಿಂದ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದೆ. ಇದರ ವಿರುದ್ಧ ದಿ: 2/6/2018 ರಂದು 10ಗಂಟೆಗೆ ಸರಿಯಾಗಿ ಪುತ್ತೂರಿನ ನೆಹರೂ ನಗರದಲ್ಲಿರುವ ದೀಪಕ್ ಕಂಪೆನಿಯ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸುಳ್ಯ ತಾಲೂಕು ಬೀಡಿ ಕೆಲಸಗಾರರ ಸಂಘದ (ಸಿ ಐ ಟಿ ಯು) ಇದರ ಅಧ್ಯಕ್ಷರಾದ ಚಂದ್ರಾವತಿ ಪೆರಾಲು, ಪ್ರ.ಕಾರ್ಯದರ್ಶಿ ಕೆ.ಪಿ.ರಾಬರ್ಟ್ ಡಿಸೋಜಾರವರು ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.