HomePage_Banner
HomePage_Banner
Breaking News

ಕೇರಳ: ನಿಪಾಹ್ ವೈರಸ್‌ಗೂ ಬಾವಲಿಗಳಿಗೂ ಸಂಬಂಧವಿಲ್ಲ..!?

ಕೋಝಿಕ್ಕೋಡ್: ಕೇರಳದಲ್ಲಿ ಇದುವರೆಗೆ ೧೨ ಜನರನ್ನು ಬಲಿತೆಗೆದುಕೊಂಡ ನಿಪಾಹ್ ವೈರಸ್‌ಗೂ ಬಾವಲಿಗೂ ಸಂಬಂಧವಿಲ್ಲ ಎಂಬ ಮಹತ್ವದ ಅಂಶ ಇದೀಗ ಬಯಲಾಗಿದೆ. ಭೋಪಾಲ್‌ನ ವೈದ್ಯಕೀಯ ಪ್ರಯೋಗಾಲಯದಲ್ಲಿ ನಡೆಸಲಾದ ಅಧ್ಯಯನದಲ್ಲಿ ‘ನೆಗೆಟಿವ್’ ಫಲಿತಾಂಶ ಬಂದಿದೆ. ಕೇರಳದ ಕೊಝಿಕ್ಕೋಡ್‌ನಲ್ಲಿ ನಿಪಾಹ್ ವೈರಸ್ ಸೋಂಕಿಗೆ ಒಂದೇ ಮನೆಯಲ್ಲಿ ನಾಲ್ವರು ಬಲಿಯಾಗಿದ್ದರು. ಇದಾದ ಬಳಿಕ ಈ ಮನೆಯ ಭಾವಿಯಲ್ಲಿದ್ದ ಬಾವಲಿಗಳನ್ನು ಅಧ್ಯಯನಕ್ಕೊಳಪಡಿಸಿದಾಗ ಇವುಗಳಿಂದ ನಿಪಾಹ್ ವೈರಸ್ ಹರಡಿಲ್ಲ ಎಂಬುದು ದೃಢವಾಗಿದೆ ಎಂದು ಈ ವರದಿ ತಿಳಿಸಿದೆ.

ಬಾವಲಿ ಸೇರಿದಂತೆ ಮನೆಯ ಸಮೀಪದ ಹಂದಿ, ಆಡು, ಕೋಳಿ ಹಾಗೂ ಹಸುವಿನ ರಕ್ತ, ಬಾಯಲ್ಲಿನ ಜೊಲ್ಲು ಹಾಗೂ ಚರ್ಮದ ಸ್ಯಾಂಪಲ್‌ಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಆದರೆ ನಿಪಾಹ್ ವೈರಸ್ ಇವುಗಳಿಂದ ಹರಡಿಲ್ಲ ಎಂದು ವರದಿ ತಿಳಿಸಿದೆ. ಹೀಗಾಗಿ ನಿಪಾಹ್ ವೈರಸ್ ಹರಡಲು ನೈಜ್ಯ ಕಾರಣಗಳೆನು ಎಂಬ ಪ್ರಶ್ನೆಗೆ ಇನ್ನೂ ಉತ್ತರಸಿಕ್ಕಿಲ್ಲ.
ಬಾವಲಿಗಳಿಂದ ಹರಡುವ ಈ ವೈರಸ್ ಮಲೇಶಿಯಾ ದೇಶದ ನಿಪಾಹ್ ಎಂಬಲ್ಲಿ ಮೊದಲು ಕಂಡುಬಂದಿತ್ತು. ಹೀಗಾಗಿ ಆ ಊರಿನ ಹೆಸರನ್ನೇ ಈ ರೋಗಕ್ಕೂ ಇಡಲಾಗಿದೆ. ಸಾಮಾನ್ಯ ಜ್ವರ, ತಲೆನೋವು ಇದರ ಆರಂಭಿಕ ಲಕ್ಷಣಗಳಾಗಿದ್ದು, ಬಳಿಕ ಮಾರಣಾಂತಿಕವಾಗಿ ಬದಲಾಗುತ್ತದೆ. ಈ ವಿಚಿತ್ರ ಕಾಯಿಲೆಗೆ ಈಗಾಗಲೇ ಕೇರಳದಲ್ಲಿ ೧೨ ಮಂದಿ ಬಲಿಯಾಗಿದ್ದು, ಇದುವರೆಗೆ ಯಾವುದೇ ಪರಿಣಾಮಕಾರೀ ಚಿಕಿತ್ಸೆಯಾಗಲೀ, ಲಸಿಕೆಯಾಗಲೀ ಲಭ್ಯವಿಲ್ಲ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.