Breaking News

ಪಂಜ ಸಂತ ರೀತಮ್ಮನವರ ಚರ್ಚಿನ ವಾರ್ಷಿಕ ಹಬ್ಬ

Advt_Headding_Middle
Advt_Headding_Middle

ಪಂಜ ಸಂತ ರೀತಮ್ಮ ಚರ್ಚಿನ ವಾರ್ಷಿಕ ಹಬ್ಬವನ್ನು ಮೇ. 23ರಂದು ಆಚರಿಸಲಾಯಿತು. ಬೆಳಿಗ್ಗೆ ದಿವ್ಯ ಬಲಿ ಪೂಜೆ ಅರ್ಪಿಸಲಾಯಿತು. ದಿವ್ಯ ಬಲಿ ಪೂಜೆಯನ್ನು ಕುಲಶೇಖರ ಚರ್ಚ್‌ನ ಧರ್ಮಗುರು ವಂದನೀಯ ಸ್ವಾಮಿ ವಿಕ್ಟರ್ ಮಚಾದೋ ನೆರವೇರಿಸಿದರು. ಕಾರ್ಯಕ್ರಮಕ್ಕೆ 17 ಚರ್ಚ್‌ನ ಧರ್ಮಗುರುಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು. ನಂತರ ಐ.ಸಿ.ವೈ.ಎಂ. ಸದಸ್ಯರು ಐಸ್‌ಕ್ರೀಂ ಸ್ಟಾಲ್ ಹಾಗೂ ಇತರ ಆಟೋಟಗಳನ್ನು ಆಯೋಜಿಸಿದರು. ಲೊರೆಟ್ಟೊ ಬ್ಯಾಂಡಿನವರು ಕಾಯಕ್ರದ ಮೆರುಗನ್ನು ಹೆಚ್ಚಿಸಿದರು ಹಬ್ಬದ ಪ್ರಯುಕ್ತ ಪ್ರತಿ ಮನೆಯವರು ನೀಡಿದ ಕಾಣಿಕೆಯನ್ನು ಸಿಯೋನ್ ಆಶ್ರಮ್ ಗುಡುಬಾಗಿಲು ಇಲ್ಲಿಗೆ ಕಳುಹಿಸಲಾಯಿತು. ಪಂಜ ಚರ್ಚ್‌ನ ಧರ್ಮಗುರು ಅನಿಲ್ ಲೋಬೋ ವಂದಿಸಿದರು.

ವಿಜೃಂಭಣೆಯ ಮರವಣಿಗೆ:
ವಾರ್ಷಿಕ ಹಬ್ಬದ ಪ್ರಯುಕ್ತ ಮೇ. 20ರಂದು ಪಂಜ ಸಿ.ಎ.ಬ್ಯಾಂಕ್ ಬಳಿಯಿಂದ ಪೇಟೆ ಮೂಲಕ ಚರ್ಚ್‌ಗೆ ಪರಮಪ್ರಸಾದ ಮೆರವಣಿಗೆ ಹಾಗೂ ಬಲಿಪೂಜೆ ನಡೆಯಿತು. ಸುಳ್ಯ ಚರ್ಚ್‌ನ ಧರ್ಮಗುರು ವಂದನೀಯ ಸ್ವಾಮಿ ನಿನ್ಸೆಂಟ್ ಡಿ’ಸೋಜಾ ದಿವ್ಯಬಲಿಪೂಜೆಯನ್ನು ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.