ರಾಷ್ಟ್ರಮಟ್ಟದ ಲಯನ್ಸ್ ಅಧಿವೇಶನ – ಅಭಿಜ್ಞಾ ಪಳಂಗಾಯರಿಗೆ ಪುರಸ್ಕಾರ

Advt_Headding_Middle
Advt_Headding_Middle

ಲಯನ್ಸ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಆಯೋಜಿಸಿದ ವಿಶ್ವಶಾಂತಿಯ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಲಯನ್ಸ್ ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನ ಪ್ರಥಮ ಪ್ರಶಸ್ತಿ ಹಾಗೂ ರಾಷ್ಟ್ರೀಯ ಮಟ್ಟದ ಮಲ್ಟಿಪಲ್‌ನಲ್ಲಿ ದ್ವಿತೀಯ ಸ್ಥಾನಿಯಾಗಿ ಆಯ್ಕೆಗೊಂಡ ಅಭಿಜ್ಞಾ ಪಳಂಗಾಯರವರನ್ನು ಪುರಸ್ಕರಿಸಲಾಯಿತು. ಬೆಂಗಳೂರಿನ ರಾಯಲ್ ಆರ್ಕೆಡ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಲಯನ್ಸ್ ಅಧೀವೇಶನದಲ್ಲಿ ಲಯನ್ಸ್ ಅಂತರಾಷ್ಟ್ರೀಯ ನಿರ್ದೇಶಕರಾದ ವಿಜಯಕುಮಾರ್ ರಾಜು ಪುರಸ್ಕರಿಸಿದರು.


ಅಂತರಾಷ್ಟ್ರೀಯ ನಿರ್ದೇಶಕರಾದ ಕೃಷ್ಣ ರೆಡ್ಡಿ, ಪಿ.ಎಸ್.ರಂಗನಾಥ್ ಉಪಸ್ಥಿತರಿದ್ದರು. ಮಲ್ಟಿಪಲ್ ಕೌನ್ಸಿಲ್ ಚಯರ್‌ಮೆನ್ ಭಾರತೀ ನಾಗೇಶ್ ಸಭ್ಯಾಧ್ಯಕತೆ ವಹಿಸಿದ್ದರು. ಅಭಿಜ್ಞಾ ಕಡಬ ಸೈಂಟ್ ಆನ್ಸ್ ಸ್ಕೂಲಿನ 8ನೇ ತರಗತಿ ವಿದ್ಯಾರ್ಥಿ. ಪಂಜದ ಶಶಿಧರ ಪಳಂಗಾಯ ಮತ್ತು ರಶ್ಮಿ ದಂಪತಿಗಳ ಪುತ್ರ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕ ಸತೀಶ್ ಪಂಜರವರು ಮಾರ್ಗದರ್ಶನ ನೀಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.