ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆ, ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿರುವ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು

Advt_Headding_Middle
Advt_Headding_Middle

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಸರ್ವ ಸೌಲಭ್ಯಗಳೊಂದಿಗೆ ಇಂದು ತಾಲೂಕಿನಲ್ಲಿ ಅತ್ಯುತ್ತ ಮ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂ ಡಿದೆಯಲ್ಲದೆ, ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಅಗ್ರ ಸ್ಥಾನಕ್ಕೇರಿದೆ.
ಶೇಕಡಾ ೮೦ಕ್ಕಿಂತ ಹೆಚ್ಚು ಅಂಕ ಬರುವ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು, ಶೇ.೧೦೦ ಫಲಿತಾಂಶ ಬಂದಿದೆ ಎಂದು ಬೀಗುವ ಸನ್ನಿವೇಶವಿರುವ ಇಂದಿನ ದಿನಮಾನದಲ್ಲಿ ಪರ್ಸಂಟೇಜ್‌ನ ಮಾನದಂಡವಿಲ್ಲದೆ, ಬಡವ ಬಲ್ಲಿದನೆಂಬ ಭೇದವಿಲ್ಲದೆ ಎಲ್ಲರನ್ನೂ ಸೇರಿಸಿಕೊಂಡು ೭೦೦ -೮೦೦ ವಿದ್ಯಾರ್ಥಿಗಳಿರುವ ವಿದ್ಯಾಸಂಸ್ಥೆ ಶೇ.೯೬ ಫಲಿತಾಂಶ ಪಡೆಯುವುದು ಸಣ್ಣ ಮಾತಲ್ಲ. ಅದೊಂದು ಅದ್ಬುತ ಸಾಧನೆ. ಇಂತಹ ದೊಡ್ಡ ಸಾಧನೆಯನ್ನು ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜು ೨೦೧೮ನೇ ಶೈಕ್ಷಣಿಕ ವರ್ಷದಲ್ಲಿ ಮಾಡಿ ತೋರಿಸಿದೆ. ಕಳೆದ ಶೈಕ್ಷಣಿಕ ವರ್ಷದಲ್ಲೂ ಶೇ.೯೫ ಫಲಿತಾಂಶವನ್ನು ಈ ಸಂಸ್ಥೆ ದಾಖಲಿಸಿತ್ತು.
ಹಲವು ವರ್ಷಗಳ ಹಿಂದೆ ಈ ಶಿಕ್ಷಣ ಸಂಸ್ಥೆಯಲ್ಲಿ ಫಲಿತಾಂಶ ಅಷ್ಟೊಂದು ಚೆನ್ನಾಗಿರಲಿಲ್ಲ. ಆಗ ಎಲ್ಲರೂ ಸರಕಾರಿ ಜೂನಿಯರ್ ಕಾಲೇಜಿನ ಬಗ್ಗೆ ಮೂಗು ಮುರಿಯುತ್ತಿದ್ದರು. ಜೂನಿಯರ್ ಕಾಲೇಜನ್ನು ಜಾನುವಾರು ಕಾಲೇಜು ಎಂದು ಲೇವಡಿ ಮಾಡುವವರೂ ಇದ್ದರು. ಆದರೆ ಕಾಲ ಉರುಳುತ್ತಾ ಶಿಕ್ಷಣ ಸಂಸ್ಥೆಯ ಸುಧಾರಣೆ ಕಂಡು ಇಂದು ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸುವಂತಾಗಿದೆ.
೨೦೧೭-೧೮ನೇ ಸಾಲಿಗೆ ಈ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ. ಒಟ್ಟಾರೆಯಾಗಿ ೭೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಸರ್ವ ಸೌಲಭ್ಯ : ಈ ಶಿಕ್ಷಣ ಸಂಸ್ಥೆಯಲ್ಲಿ ಸರ್ವ ಸೌಲಭ್ಯವನ್ನು ಸರಕಾರದ ವತಿಯಿಂದ ನೀಡಲಾಗುತ್ತಿದೆ. ಮಕ್ಕಳ ಸಂಖ್ಯೆಗನು ಗುಣವಾಗಿ ತರಗತಿ ಕೊಠಡಿಗಳು, ಆಟವಾಡಲು ವಿಸ್ತಾರವಾದ ಆಟದ ಮೈದಾನ, ಹಾಗೂ ಸರಕಾರದಿಂದ ದೊರೆಯುವ ಸ್ಕಾಲರ್ ಶಿಪ್ ಇನ್ನಿತರ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.
ಉಪನ್ಯಾಸಕರ ಕೊರತೆ: ತಾಲೂಕಿನ ಅತೀ ದೊಡ್ಡ ವಿದ್ಯಾಸಂಸ್ಥೆ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜು. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಬೇಕಾಗುವಷ್ಟು ಉಪನ್ಯಾಸಕರು ಇಲ್ಲ. ಕನ್ನಡ ಮತ್ತು ಇತಿಹಾಸ ವಿಷಯ ಬೋಧನೆಗೆ ಉಪನ್ಯಾಸಕರ ಕೊರತೆ ಇದೆ. ಆದರೆ ಇರುವ ಅಧ್ಯಾಪಕರೆಲ್ಲ ಅನುಭವಿಗಳು. ಅತ್ಯುತ್ತಮ ಶೈಕ್ಷಣಿಕ ಅರ್ಹತೆ ಹೊಂದಿರುವವರು. ಕೊರತೆ ಇರುವ ಉಪನ್ಯಾಸಕರ ಸ್ಥಾನಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ಉಪನ್ಯಾಸಕರುಗಳ ನೇಮಕ ಮಾಡಿ ವಿಷಯ ಬೋಧನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರ ನಿಯೋಜನೆ ಎಂದಾದರೆ ಇಲ್ಲಿ ಎಲ್ಲಾ ವಿಷಯಗಳಿಗೆ ತಲಾ ಇಬ್ಬರು ಉಪನ್ಯಾಸಕರ ನೇಮಕ ಮಾಡಬೇಕಾಗುತ್ತದೆ.
ಅತ್ಯುತ್ತಮ ಫಲಿತಾಂಶ : ೨೦೧೭-೧೮ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಕಾಲೇಜಿಗೆ ಮೂರು ವಿಭಾಗದಲ್ಲಿ ಶೇ.೯೬ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ ೫೭ ವಿದ್ಯಾರ್ಥಿಗಳಲ್ಲಿ ೫೬ ಮಂದಿ ತೇರ್ಗಡೆಗೊಂಡು ಶೇ.೯೮ಫಲಿತಾಂಶ ಪಡೆದು ಕೊಂಡಿದೆ. ಕಲಾ ವಿಭಾಗಲ್ಲಿ ೯೨ ವಿದ್ಯಾರ್ಥಿಗಳಲ್ಲಿ ೮೬ ಮಂದಿ ತೇರ್ಗಡೆಯಾಗಿ ಶೇ.೯೫ ಫಲಿತಾಂಶ ಪಡೆದುಕೊಂಡರೆ, ವಾಣಿಜ್ಯ ವಿಭಾಗದಲ್ಲಿ ೧೬೮ ವಿದ್ಯಾರ್ಥಿಗಳಲ್ಲಿ ೧೬೩ ಮಂದಿ ಪಾಸಾಗಿ ಶೇ. ೯೭ ಫಲಿತಾಂಶ ಬಂದಿದೆ. ಪರಿಣಾಮವಾಗಿ ಕಾಲೇಜಿನ ಬಗ್ಗೆ ಸಮಾಜದಲ್ಲಿ ಉತ್ತಮ ಭಾವನೆ ಬಂದಿದೆ. ಶ್ರೀಮಂತ ಪೋಷಕರು ಕೂಡಾ ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಲು ಮುಂದೆ ಬರುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ವರ್ಷ ವರ್ಷ ಏರುತ್ತಿದೆ. ಆದ್ದರಿಂದ ಅಗತ್ಯವಿರುವ ಉಪನ್ಯಾಸಕರ ಹೆಚ್ಚಳ, ಪೀಠೋಪಕರಣಗಳ ಒದಗಣೆ, ಲ್ಯಾಬ್‌ನ ನವೀಕರಣ ಕಾರ್ಯಗಳನ್ನು ಶಾಸಕರು ಮತ್ತು ಸರಕಾರ ಮುತುವರ್ಜಿ ವಹಿಸಿ ಮಾಡಬೇಕಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.