ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾಂತ್ರಿಕ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಬೆಸ್ಟ್ ಔಟ್‌ಗೋಯಿಂಗ್ ವಿದ್ಯಾರ್ಥಿ ಪ್ರಶಸ್ತಿ ಪ್ರಧಾನ

Advt_Headding_Middle
Advt_Headding_Middle

2017-18ರ ಸಾಲಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಕೋರ್ಸ್ ಮುಗಿಸಲಿರುವ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಸೋಸಿಯೇಶನ್‌ನ ವತಿಯಿಂದಮೇ. ೨೫ರಂದು ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಎ. ಜ್ಞಾನೇಶ್‌ರವರು ವಹಿಸಿದ್ದು, ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿಯ ಜೊತೆಗೆ ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ, ಇಂಜಿನಿಯರಿಂಗ್ ಪ್ರೊಫೆಷನ್‌ನ ಉತ್ತಮ ಸ್ಥಾನವನ್ನು ಪಡೆಯುವಲ್ಲಿ ತಮ್ಮ ಜವಾಬ್ದಾರಿಯನ್ನು ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ವಿಭಾಗ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆ.ಎಸ್. ರವರು ಬೀಳ್ಕೊಡುವ ವಿದ್ಯಾರ್ಥಿಗಳ ವಿವರವನ್ನು ತಿಳಿಸುವುದರ ಜೊತೆಗೆ ಅವರ ಮುಂದಿನ ಜೀವನಕ್ಕೆ ಶುಭಹಾರೈಸಿದರು. ಪ್ರಾಧ್ಯಾಪಕರುಗಳಾದ ಡಾ. ಗಂಗಾಧರನ್ ನಾಯರ್, ಪ್ರೊ. ಶಿವರಾಮು ಹೆಚ್. ಟಿ. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಇದೇ ಸಮಯದಲ್ಲಿ ೮ನೇ ಸೆಮಿಸ್ಟರ್‌ನ ಬೀಳ್ಕೊಡುವ ವಿದ್ಯಾರ್ಥಿಗಳು ತಮ್ಮ ನಾಲ್ಕು ವರ್ಷದಲ್ಲಿ ಕಾಲೇಜಿನಲ್ಲಿ ಮತ್ತು ವಿಭಾಗದಲ್ಲಿ ಆದ ಹಿತ ಅನುಭವಗಳನ್ನು ಹಂಚಿಕೊಂಡರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಸೋಸಿಯೇಶನ್ ಸಂಯೋಜಕರಾದ ಪ್ರೊ. ಪ್ರಶಾಂತ ಕೆ. ಯವರು ಸ್ವಾಗತಿಸಿದರು. ಸಂಯೋಜಕ ಪ್ರೊ. ಗೋಕುಲ್‌ದಾಸ್ ಎಂ, ಅಸೋಸಿಯೇಶನ್‌ನ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು.

ಬೆಸ್ಟ್ ಔಟ್‌ಗೋಯಿಂಗ್ ವಿದ್ಯಾರ್ಥಿ ಪ್ರಶಸ್ತಿ ಪುರಸ್ಕಾರ
ಈ ವರ್ಷದ ಮೆಕ್ಯಾನಿಕಲ್ ವಿಭಾಗದದಿಂದ ಕೊಡಮಾಡುವ ಪ್ರೊ. ಮಹಾಬಲಕಿರಣ್ ದತ್ತಿ ನಿಧಿ “ಬೆಸ್ಟ್ ಔಟ್‌ಗೋಯಿಂಗ್ ವಿದ್ಯಾರ್ಥಿ” ಪಶಸ್ತಿಯನ್ನು ೮ನೇ ಸೆಮಿಸ್ಟರ್‌ನ ಸಿನಾನ್ ಎಸ್.ಎಂ. ರವರಿಗೆ ಪ್ರಾಂಶುಪಾಲರು ನೀಡಿದರು. ಈ ಪ್ರಶಸ್ತಿಯು ಈ ಹಿಂದೆ ವಿಭಾಗದಲ್ಲಿ ದುಡಿಯುತ್ತಿದ್ದ ಪ್ರೊ. ಮಹಾಬಲ ಕಿರಣ್ ಎಂಬ ಪ್ರಾಧ್ಯಾಪಕರ ಹೆಸರಿನಲ್ಲಿ ಕೊಡುತ್ತಿದ್ದು, ಅಕಾಲಿಕ ಮರಣಾಂತರ ವಿಭಾಗವು ಅವರನ್ನು ಕಳೆದುಕೊಂಡಿದ್ದು ಅವರ ಸವಿನೆನಪಿಗಾಗಿ ಕೊಡಲ್ಪಡುತ್ತಿದ್ದು, ವಿಭಾಗದಲ್ಲಿ ಕಲಿತ ವಿದ್ಯಾರ್ಥಿಯ ಉತ್ತಮ ಗುಣನಡತೆ, ಶೈಕ್ಷಣಿಕ ಪ್ರತಿಭೆ, ಕ್ರೀಡಾಪ್ರತಿಭೆ, ಸಾಂಸ್ಕೃತಿಕ ಪ್ರತಿಭೆ ಮತ್ತು ಉದ್ಯೋಗ ಸಂದರ್ಶನವನ್ನು ಒಳಗೊಂಡಂತೆ ವಿವಿಧ ವಿಷಯಗಳಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ, ವಿಭಾಗದಲ್ಲಿ ದುಡಿಯುತ್ತಿರುವ ಪ್ರಾಧ್ಯಾಪಕರು ಮತ್ತು ಬೋದಕೇತರರನ್ನು ಒಳಗೊಂಡ ಬಳಗದ ಅಭಿಪ್ರಾಯ ಸಂಗ್ರಹಿಸಿ ಆಯ್ಕೆ ಮಾಡಲಾಗುತ್ತದೆ. ನಗದು ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಈ ಪುರಸ್ಕಾರವನ್ನು ಗೌರವಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.