ಕೊಲ್ಲಮೊಗ್ರದ ದೇವಸ್ಥಾನಗಳಲ್ಲಿ ಸಂಕಲ್ಪ ಮತ್ತು ಪ್ರಾರ್ಥನೆ

Advt_Headding_Middle
Advt_Headding_Middle

 

ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನದ ಅಂಗವಾಗಿ ಮೇ.27ರಂದು ಸನಾತನ ಸಂಸ್ಥೆಯ ಸುಳ್ಯ ಕೇಂದ್ರದ ವತಿಯಿಂದ ಕೊಲ್ಲಮೊಗ್ರದ ಎರಡು ದೇವಸ್ಥಾನಗಳಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಪ.ಪೂ. ಡಾ| ಜಯಂತ ಬಾಳಾಜಿ ಆಠವಲೆ ಅವರ ದಿವ್ಯ ಸಂಕಲ್ಪದಂತೆ ಸನಾತನ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು; ಗುರುದೇವರ ಮಹಾಮೃತ್ಯು ಯೋಗವು ನಿವಾರಣೆಯಾಗಬೇಕು; ಅವರಿಗೆ ದೀರ್ಘಾಯುಷ್ಯ ದೊರೆತು ಅವರ ಆರೋಗ್ಯ ಹಾಗೂ ಪ್ರಕೃತಿಯು ಸುಧಾರಿಸಬೇಕು ಎಂಬಿತ್ಯಾದಿಯಾಗಿ ಸಂಕಲ್ಪ ಹಾಗೂ ಪ್ರಾರ್ಥನೆ ಮಾಡಲಾಯಿತು.

ಬೆಳಗ್ಗೆ ಶ್ರೀ ಅನ್ನಪೂರ್ಣೇಶ್ವರೀ ದೇವಿಯ ಸನ್ನಿಧಿಯಲ್ಲಿ ಅರ್ಚಕರಾದ ಪುಷ್ಪರಾಜ್ ಅವರು ಸಂಕಲ್ಪ ಮತ್ತು ಪ್ರಾರ್ಥನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಅನ್ನಪೂರ್ಣಾದೇವಿ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಧರ್ಮಪಾಲ ಅಂಬೆಕಲ್ಲು, ನಂದಕುಮಾರ್ ಪ್ರಭು, ಬಿ. ರಾಮ ಭಟ್ ಪಟ್ವರ್ಧನ್, ಶಿವರಾಮಚಂದ್ರ ಶಿವಾಲರವರು ಉಪಸ್ಥಿತರಿದ್ದರು.
ಮಧ್ಯಾಹ್ನ ಕಟ್ಟ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅರ್ಚಕರಾದ ವೇ| ಮೂ| ಕೃಷ್ಣಮೂರ್ತಿಯವರು ಸಂಕಲ್ಪ ಹಾಗೂ ಪ್ರಾರ್ಥನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯಪ್ರಕಾಶ ಕಟ್ಟ ನಂದಕುಮಾರ್ ಪ್ರಭು, ಬಿ. ರಾಮ ಭಟ್ ಪಟ್ವರ್ಧನ್, ಶಿವರಾಮಚಂದ್ರ ಶಿವಾಲ, ಧರ್ಮಪಾಲ ಅಂಬೆಕಲ್ಲು, ಕಿರಣ್‌ಕುಮಾರ್ ಹಾಗೂ ಉಮಾ ಜಯಪ್ರಕಾಶ್ ಉಪಸ್ಥಿತರಿದ್ದರು. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.