Breaking News

ಸಿಬಿಎಸ್‌ಇ 10ನೇ ಕ್ಲಾಸ್ ಫಲಿತಾಂಶ: ನಾಲ್ವರಿಗೆ 500 ಕ್ಕೆ499 ಅಂಕ

Advt_Headding_Middle
Advt_Headding_Middle


ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್‌ಇ) ಹತ್ತನೇ ತೆರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. 500ಕ್ಕೆ499 ಅಂಕ ಗಳಿಸಿರುವ ನಾಲ್ಕು ವಿದ್ಯಾರ್ಥಿಗಳು ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.
ಗುರುಗ್ರಾಮ್‌ನ ದೆಹಲಿ ಪಬ್ಲಿಕ್ ಶಾಲೆಯ ಪಾರ್ಕರ್ ಮಿತ್ತಲ್, ಬಿಜನೋರ್‌ನ ಆರ್‌ಪಿ ಪಬ್ಲಿಕ್ ಶಾಲೆಯ ರಿಮ್‌ಜಿಮ್ ಅಗರ್ವಾಲ್, ಉತ್ತರ ಪ್ರದೇಶದ ಶಮ್ಲಿಯಲ್ಲಿರುವ ಸ್ಕಾಟಿಸ್ ಇಂಟರ್ನ್ಯಾಷನಲ್ ಶಾಲೆಯ ನಂದಿನಿ ಗರ್ಗ್ ಹಾಗೂ ಕೊಚ್ಚಿಯ ಭವಾನಿ ವಿದ್ಯಾಲಯದ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಜಿ. ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ೪೪೫೩ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ 16,38,420  ವಿದ್ಯಾರ್ಥಿಗಳು ಹಾಜರಾಗಿದ್ದರು. ಒಟ್ಟು ಶೇ.86.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ88.67 ಬಾಲಕಿಯರು ಹಾಗೂ ೮೫.೩೨ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಸಿಬಿಎಸ್‌ಇ 12 ಪರೀಕ್ಷೆಯಂತೆಯೇ 10ನೇ ತರಗತಿಯಲ್ಲೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಫಲಿತಾಂಶ ವೀಕ್ಷಿಸಲು cbseresults.nic.in / cbse.nic.in / results.nic.in  ಗೆ ಭೇಟಿ ನೀಡಿ ಫಲಿತಾಂಶ ಪರಿಶೀಲಿಸಬಹುದು.
ಬಿಎಸ್‌ಎನ್:  57766, ಏರ್‌ಸೆಲ್:  5800002 , ಐಡಿಯಾ:54321, 51234  , ಏರ್‌ಟೆಲ್: 54321202  ಕ್ಕೆ ಎಸ್‌ಎಂಎಸ್ ಮಾಡುವ ಮೂಲಕ ಫಲಿತಾಂಶ ಪಡೆಯಬಹುದು.ಪ್ರತಿ

ದೆಹಲಿ, ಹರಿಯಾಣ ಹಾಗೂ ಜಾರ್ಖಂಡ್‌ನಲ್ಲಿ ೧೦ನೇ ತರಗತಿಯ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಈ ವರ್ಷದ ಪರೀಕ್ಷೆಗಳು ವಿವಾದಕ್ಕೆ ಕಾರಣವಾಗಿದ್ದವು. ಆದರೆ, ಮಾನವ ಸಂಪನ್ಮೂಲ ಸಚಿವಾಲಯವು ಮರು ಪರೀಕ್ಷೆ ನಡೆಸದೆ ಇರಲು ತೀರ್ಮಾನಿಸಿತ್ತು.

ತಿರುವನಂತಪುರಂ ಉತ್ತಮ ಸಾಧನೆ
ಪ್ರಾದೇಶಿಕವಾರು ಫಲಿತಾಂಶದಲ್ಲಿ ಕೇರಳದ ರಾಜಧಾನಿ ತಿರುವನಂತಪುರಂ ಉತ್ತಮ ಸಾಧನೆ ತೋರಿದ್ದು, ಇಲ್ಲಿನ ಶೇ. 99.6 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.