ಗ್ರೀನ್‌ವ್ಯೂ ಶಾಲಾ ಪ್ರಾರಂಭೋತ್ಸವ

Advt_Headding_Middle
Advt_Headding_Middle

ಸುಳ್ಯದ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಈ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ಸಂಭ್ರಮದಿಂದ ಜರಗಿತು. ಮೊದಲ ದಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳು ಶಾಲಾ ಪರಿಸರ, ಕ್ಲಾಸ್‌ರೂಂಗಳನ್ನು ಸ್ವತಃ ಉತ್ಸಾಹದಿಂದ ಸ್ವಚ್ಛಗೊಳಿಸಿ ಭಾಗಿಯಾದರು. ಹತ್ತಿರದ ಮನೆಗಳಿಗೆ ತೆರಳಿ ಸ್ವಚ್ಛತೆ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.


ಎರಡನೇ ದಿನ ಅಧ್ಯಾಪಕರುಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮಗಳನ್ನು ಶಾಲಾ ಆಡಳಿತ ಮಂಡಳಿ ಆಯೋಜಿಸಲಾಗಿತ್ತು. ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಬ್ಯಾಂಡ್ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳನ್ನು ವಿತರಿಸಿ ಮಾತನಾಡಿದ ಶಾಲಾ ಸಂಚಾಲಕ ಜೇಸೀ ಬಿ. ಎಸ್ ಶರೀಫ್ ಈ ಉತ್ಸಾಹದ ಚಿಲುಮೆ ಇಡೀ ವರ್ಷ ಚಿಮ್ಮುತ್ತಿರಬೇಕು. ಪ್ರತಿಯೊಂದು ಗಂಟೆ, ನಿಮಿಷ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವತ್ತ ಶಿಕ್ಷಕರು ಗಮನಹರಿಸಬೇಕು. ಮುಂದಿನ ಯಶಸ್ಸಿನ ಅನ್ವೇಷಣೆಯತ್ತ ವಿದ್ಯಾರ್ಥಿಗಳು ಮುನ್ನುಗ್ಗುತ್ತಿರಬೇಕು ಎಂದು ಕರೆ ನೀಡಿದರು. ಶಿಕ್ಷಣದೊಂದಿಗೆ ಇಂದು ಮಾನವೀಯತೆ ಸವಾಲಾಗಿದೆ. ಇದರ ಬಗ್ಗೆ ಎಚ್ಚರವಹಿಸಿಕೊಳ್ಳಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಅಮರನಾಥ ಬಿ. ಪಿ., ಕಾರ್ಯದರ್ಶಿ ಕೆ. ಬಿ. ಇಬ್ರಾಹಿಂ, ಜಿಲ್ಲಾ ಯೋಜನಾ ಸಮಿತಿ ಸದಸ್ಯ ಮುಸ್ತಫ ಕೆ. ಎಂ. ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಮಂಜುನಾಥ ಬಂಗ್ಲೆಗುಡ್ಡೆ ಸ್ವಾಗತಿಸಿ, ರಂಜಿತ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.