ಸುಳ್ಯ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢ ಶಾಲಾ ಪ್ರಾರಂಭೋತ್ಸವ

Advt_Headding_Middle
Advt_Headding_Middle


ಸುಳ್ಯ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢ ಶಾಲೆಯ 2018-19ನೇ ಸಾಲಿನ ಶಾಲಾ ಪ್ರಾರಂಭೋತ್ಸವವು ಮೇ. 29ರಂದು ನಡೆಯಿತು. ಆ ಪ್ರಯುಕ್ತ ತರಗತಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಬ್ಯಾಂಡ್ ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳೆಲ್ಲರನ್ನು ಕರೆದುಕೊಂಡು ಲಾಲ್ ಬಹುದ್ದೂರ್ ಶಾಸ್ತ್ರಿ ವೃತ್ತದ ತನಕ ಹೋಗಿ ಅಧ್ಯಾಪಕ ವೃಂದದೊಂದಿಗೆ ಮರಳಿ ಬಂದರು. ನಂತರ ಶ್ರೀಮತಿ ಜಯಶ್ರೀ ಎಸ್.ಆರ್ ಇವರ ಪ್ರಾರ್ಥನೆಯೊಂದಿಗೆ ಸಭಾ ಕಾರ‍್ಯಕ್ರಮ ಪ್ರಾರಂಭವಾಯಿತು. ಮುಖ್ಯೋಪಾಧ್ಯಾಯಿನಿ ಪ್ರೇಮಲತ ಎ.ಎಚ್ ಪ್ರಾಸ್ಥಾವಿಕ ಭಾಷಣಗೈದರು. ಶ್ರೀ ಶಾರದಾ ಪದವಿಪೂರ್ವ ಮಹಿಳಾ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಸ್ವರ್ಣಕಲಾ.ಎ.ಎಸ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭಹಾರೈಸಿದರು. ಪದವಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಜೋತ್ಸ್ನಾರವರು ಯಶಸ್ವಿಗಾಗಿ ಪ್ರಯತ್ನಿಸಿ ಎಂದು ಹಾರೈಸಿದರು. ಭಾಷ ಶಿಕ್ಷಕಿಯಾಗಿರುವ ಸುಮಲತಾ.ಪಿ ಕಾರ‍್ಯಕ್ರಮ ನಿರೂಪಿಸಿದರು. ವೃತ್ತಿ ಶಿಕ್ಷಕಿ ಶ್ರೀಮತಿ ರಾಜೀವಿ.ಎ.ಸಿ ಯವರು ವಿದ್ಯಾರ್ಥಿನಿಯರಿಗೆ ಸಿಹಿತಿಂಡಿ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.