Breaking News

ಕಡಬದ ಯುವಕ ಪ್ರೊ ಕಬಡ್ಡಿಗೆ ಆಯ್ಕೆ

Advt_Headding_Middle
Advt_Headding_Middle


ಕಡಬ: ಪ್ರೊ ಕಬಡ್ಡಿ ಲೀಗ್‌ಗೆ ನಡೆದ 6ನೇ ಆವೃತ್ತಿ ಆಟಗಾರರ ಹರಾಜಿನಲ್ಲಿ ಕಡಬದ ಯುವಕ ಮಿಥಿನ್ ಕುಮಾರ್ ಬೆಂಗಾಲ್ ವಾರಿಯರ್ಸ್ ಪರ ಆಡಲು ಆಯ್ಕೆಯಾಗಿದ್ದಾರೆ. ನ್ಯೂ ಯಂಗ್ ಪ್ಲೇಯರ್ ವಿಭಾಗದಿಂದ ಹರಾಜಿಗೆ ಲಭ್ಯರಿದ್ದ ಮಿಥಿನ್‌ರನ್ನು ಬೆಂಗಾಲ್ ವಾರಿಯರ್ಸ್ ಫ್ರಾಂಚೈಸಿ ಮೂಲಬೆಲೆ 6.6 ಲಕ್ಷ ಕೊಟ್ಟು ಖರೀದಿಸಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಅಣ್ಣಯ್ಯ ಹಾಗೂ ಪ್ರೇಮ ದಂಪತಿಯ ಮಗನಾಗಿ 1998ರಲ್ಲಿ ಜನಿಸಿದ ಮಿಥಿನ್ ಕುಮಾರ್, ಪಿಯುಸಿಯಿಂದ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್‌ನ ತರಬೇತುದಾರರಾಗಿರುವ ಕೃಷ್ಣಾನಂದ ರಾವ್ ಮುಂಡಾಜೆ, ಮಿಥಿನ್‌ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕಳೆದ ತಿಂಗಳು ಮುಂಬೈನಲ್ಲಿ ನಡೆದಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಮಿಥಿನ್, ರಾಷ್ಟ್ರೀಯ ಕೂಟಗಳಲ್ಲೂ ರೈಡರ್ ಆಗಿ ಮಿಂಚಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.