ಆರ್.ಆರ್.ನಗರ : ಕಾಂಗ್ರೆಸ್‌ನ ಮುನಿರತ್ನಗೆ ಭರ್ಜರಿ ಗೆಲುವು

Advt_Headding_Middle
Advt_Headding_Middle

 

ಬೆಂಗಳೂರು: ಇದೇ 28ರಂದು ನಡೆದಿದ್ದ ರಾಜರಾಜೇಶ್ವರಿ ನಗರ (ಆರ್.ಆರ್.ನಗರ) ವಿಧಾನಸಭಾ ಕ್ಷೇತ್ರದ ಮತದಾನದ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್‌ನ ಮುನಿರತ್ನ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆಯ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ಡುಕೊಂಡ ಮುನಿರತ್ನ, ತನ್ನ ಸಮೀಪದ ಸ್ಪರ್ಧಿ ಬಿಜೆಪಿಯ ತುಳಸಿ ಮುನಿರಾಜುಗೌಡ ವಿರುದ್ಧ ೪೧, 162ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ನೋಟಾ ಮತಗಳು ದಾಖಲಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನ ಸೆಳೆದಿದ್ದ, ನಟ ಹುಚ್ಚ ವೆಂಕಟ್ ನೋಟಾಕ್ಕಿಂತಲೂ ಕಡಿಮೆ, 604 ಮತಗಳನ್ನು ಪಡೆದಿದ್ದಾರೆ. 14 ಸುತ್ತುಗಳ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡ ವೇಳೆ ಸೋಲು ಖಾತ್ರಿಯಾಗುತ್ತಲೇ ಬಿಜೆಪಿಯ ತುಳಸಿ ಮುನಿರಾಜುಗೌಡ ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು. ಫಲಿತಾಂಶ ಘೋಷಣೆಯಾಗುತ್ತಲೇ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುತ್ತಾ ಸಂಭ್ರಮಾಚರಿಸಿದರು.
ಚುನಾವಣಾ ಅಕ್ರಮ ನಡೆದಿರುವ ಕಾರಣಕ್ಕೆ ಮೇ ೧೫ರಂದು ನಡೆಯಬೇಕಿದ್ದ ಮತದಾನವನ್ನು ಮುಂದೂಡಲಾಗಿತ್ತು. ಇದೇ 28ರಂದು ನಿಗದಿಯಾಗಿದ್ದ ಚುನಾವಣೆಯಲ್ಲಿ ಶೇ ೫೪.೨೦ ರಷ್ಟು ಮತದಾನ ನಡೆದಿತ್ತು.

ಕಾಂಗ್ರೆಸ್- ಮುನಿರತ್ನ-  97,440
ಬಿಜೆಪಿ- ತುಳಸಿ ಮುನಿರಾಜುಗೌಡ –  56,278
ಜೆಡಿಎಸ್ – ಜಿ.ಎಚ್. ರಾಮಚಂದ್ರ-  45, 354
ಪಕ್ಷೇತರ – ಹುಚ್ಚ ವೆಂಕಟ್- 604
ನೋಟಾ – 2,061

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.