Breaking News

ಇನ್ನಷ್ಟು ವ್ಯವಸ್ಥಿತವಾಗಿ ಚುನಾವಣೆ ಎದುರಿಸುತ್ತಿದ್ದರೆ ಗೆಲುವಿನ ಅಂತರ 35,000ದಾಟುತ್ತಿತ್ತು: ಎ.ವಿ.ತೀರ್ಥರಾಮ

Advt_Headding_Middle
Advt_Headding_Middle


ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 26000 ಅಂತರಗಳಿಂದ ವಿಜಯಿಯಾಗಿದ್ದಾರೆ. ಆದರೆ ನಾವು ಚುನಾವಣೆಯನ್ನು ಇನ್ನಷ್ಟು ವ್ಯವಸ್ಥಿತವಾಗಿ ಎದುರಿಸುತ್ತಿದ್ದರೆ ಗೆಲುವಿನ ಅಂತರ 35,000ದಾಟುತ್ತಿತ್ತು ಎಂದು ಸುಳ್ಯ ವಿಧಾನಸಭಾ ಕೇತ್ರದ ಚುನಾವಣಾ ಉಸ್ತುವಾರಿ ಎ.ವಿ.ತೀರ್ಥರಾಮ ಹೇಳಿದರು.
ಸುಳ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಇಷ್ಟು ದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದರೂ ನಿರೀಕ್ಷಿತ ಬಹುಮತ ನಮಗೆ ಬಂದಿಲ್ಲ. ನಮ್ಮ ನಿರೀಕ್ಷಿತ ಮತಗಳ ಪೈಕಿ 2000ದಷ್ಟು ಕಡಿಮೆ ಮತ ನಮಗೆ ಬಂದಿದೆ. ಹೀಗಾಗಿ ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಾವೆಲ್ಲಾ ವ್ಯವಸ್ಥಿತವಾಗಿ ಚುನಾವಣೆ ಎದುರಿಸಿದ್ದೇವೆ. ಆದರೆ ಇನ್ನಷ್ಟು ವ್ಯವಸ್ಥಿತರಾಗಿ ಸಿದ್ದರಾಗುತ್ತಿದ್ದರೆ ಗೆಲುವಿನ ಅಂತರ ಅಧಿಕವಾಗುತ್ತಿತ್ತು. ಜನ ಬಿಜೆಪಿಯನ್ನು ಗೆಲ್ಲಿಸಲು ತೀರ್ಮಾನ ಮಾಡಿದ್ದರು. ಹಾಗಾಗಿ ಗೆಲುವು ಸುಲಭವಾಯಿತು ಎಂದು ಹೇಳಿದರು. ಕಾಂಗ್ರೆಸ್‌ನವರು ಈ ಬಾರಿ ನಮ್ಮಿಂದಲೂ ಒಂದು ಹೆಜ್ಜೆ ಮುಂದೆ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ನಮ್ಮ ತಂತ್ರಗಾರಿಕೆಯನ್ನು ಬಲ್ಲವರೇ ಅಲ್ಲಿದ್ದರು. ಆದರೆ ಅವರಲ್ಲಿ ಕಾರ್ಯಕರ್ತರಿರಲಿಲ್ಲ. ಹೀಗಾಗಿ ಗೆಲುವು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಸುಳ್ಯ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಜನಸಂಘದ ಕಾಲದಿಂದಲೂ ಇಲ್ಲಿ ಬಿಜೆಪಿಯನ್ನು ಹಿರಿಯರು ಕಟ್ಟಿ ಬೆಳೆಸಿದ್ದಾರೆ. ೧೯೯೪ರ ಚುನಾವಣೆಯಲ್ಲಿ ಇಲ್ಲಿ ೧೦ ಮನೆಗಳಿಗೆ ಒಬ್ಬರು ಕಾರ್ಯಕರ್ತರು ಎಂಬ ಜವಾಬ್ದಾರಿ ವಹಿಸಲಾಗಿತ್ತು. ೨೫ ವರ್ಷಗಳ ಬಳಿಕ ಪೇಜ್ ಪ್ರಮುಖ್ ಎಂಬ ಕಲ್ಪನೆಯಡಿ ಚುನಾವಣೆ ಎದುರಿಸಿದೆವು ಎಂದು ತೀರ್ಥರಾಮರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.