Breaking News

ಹಿಂದೂ ವಿಚಾರಧಾರೆಯ ಸಿದ್ದಾಂತದಡಿಯಲ್ಲಿ ಗೆಲುವು: ಸಂಸದ ಕಟೀಲ್

Advt_Headding_Middle
Advt_Headding_Middle


ಕರಾವಳಿಯಲ್ಲಿ ಈ ಬಾರಿ ಬಿಜೆಪಿ ಇಷ್ಟು ಜಯಭೇರಿ ಬಾರಿಸಲು ಹಿಂದೂ ವಿಚಾರಧಾರೆಯ ಸಿದ್ದಾಂತವೇ ಕಾರಣ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು. ಸುಳ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಚುನಾವಣೆಯಲ್ಲಿ ಅಂಗಾರರು ಗೆದ್ದಾಗ ಇಲ್ಲಿ ಖುಷಿ ಇತ್ತು, ಆದರೆ ಜಿಲ್ಲೆಯ ಇತರ ಕಡೆ ಬೇಸರ ಇತ್ತು. ಸುಳ್ಯದ ಮೂಲಕ ವಿಜಯದ ಬಾಗಿಲು ತೆರೆದಿದೆ. ಮುಂದೆ ಬಿಜೆಪಿ ಜೈತ್ರಯಾತ್ರೆಯ ಮೂಲಕ ಇಡೀ ಜಿಲ್ಲೆಯಲ್ಲಿ ಕಮಲ ಅರಳಿಸುವುದಾಗಿ ಅಂದು ಹೇಳಿದ್ದೆ. ಅದು ಇಂದು ನಿಜವಾಗಿದೆ. ನಮ್ಮ ದೇವದುರ್ಲಭ ಕಾರ್ಯಕರ್ತರಿಂದ ಈ ಗೆಲುವು ಸಾಧ್ಯವಾಗಿದೆ ಎಂದು ಹೇಳಿದರು.


೫ ವರ್ಷಗಳ ಸಿದ್ದರಾಮಯ್ಯ ಸರಕಾರದ ಹಿಂದೂ ವಿರೋಧಿ ನೀತಿ ಹಾಗೂ ಹಿಂದೂ ಕಾರ್ಯಕರ್ತರ ಹ್ತಯೆಯ ವಿರುದ್ಧ ಹಿಂದೂ ಸಮಾಜ ಒಗ್ಗಟ್ಟಾಗಿದೆ. ಅದರ ಜೊತೆಗೆ ರಾಷ್ಟ್ರಕ್ಕೆ ನರೇಂದ್ರ ಮೋದಿಯವರ ಅಭಿವೃದ್ಧಿ ರಾಜಕಾರಣವನ್ನು ಜನತೆ ಮೆಚ್ಚಿದ್ದಾರೆ. ಹೀಗಾಗಿ ಬಿಜೆಪಿ ಪರವಾಗಿ ಮತ ನೀಡಿದ್ದಾರೆ ಎಂದು ಕಟೀಲ್ ಹೇಳಿದರು. ರಾಜ್ಯದಲ್ಲಿ ಅನೈತಿಕ ಸರಕಾರ ಅಸ್ತಿತ್ವಕ್ಕೆ ಬಂದಿದೆ. ತಾನು ಜನರ ಮುಲಾಜಿನಲ್ಲಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ, ಕರ್ನಾಟಕದ ೬.೫ ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ೨೪ ಗಂಟೆಯೊಳಗೆ ಎಲ್ಲಾ ಸಾಲ ಮನ್ನಾ ಮಾಡುವುದಾಗಿ ಹೇಳಿದ ಅವರಿಗೀಗ ಸಾಲ ಮನ್ನಾ ಮಾಡಲು ಮನಸ್ಸಿಲ್ಲ. ಈ ಸರಕಾರ ೩ ತಿಂಗಳಿಗಿಂತ ಹೆಚ್ಚು ಬಾಳುವುದಿಲ್ಲ. ಐದಾರು ತಿಂಗಳಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ. ಅಂಗಾರರು ಸಚಿವರಾಗುತ್ತಾರೆ ಎಂದು ಸಂಸದರು ಹೇಳಿದರು.
ಮಂಗಳೂರಿನಲ್ಲಿ ಭಾರೀ ಮಳೆಯಿಂದ ಅಪಾರ ಹಾನಿಯಾದಾಗ ದೇಶದ ಪ್ರಧಾನಮಂತ್ರಿಯವರೇ ನಿಮ್ಮ ಜೊತೆ ನಾವಿದ್ದೇವೆ ಎಂಬ ಹೇಳಿಕೆ ನೀಡಿದರು. ಆದರೆ ರಾಜ್ಯದ ಮುಖ್ಯಮಂತ್ರಿ ಯಾವುದೇ ಹೇಳಿಕೆ ನೀಡಲಿಲ್ಲ. ಅಧಿಕಾರಿಗಳ ತಂಡವನ್ನು ಜಿಲ್ಲೆಗೆ ಕಳಿಸಿಲ್ಲ. ಯಾವುದೇ ಪ್ಯಾಕೇಜ್ ಘೋಷಿಸಿಲ್ಲ ಎಂದು ನಳಿನ್‌ಕುಮಾರ್ ಕಟೀಲ್ ಆರೋಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.