ಅಂಗಾರರ ಮಾರ್ಗದರ್ಶನದಲ್ಲಿ ದ.ಕ ಜಿಲ್ಲೆಯ ಅಭಿವೃದ್ಧಿಗೆ ಬದ್ಧ : ಮಠಂದೂರು

Advt_Headding_Middle
Advt_Headding_Middle

ಸುಳ್ಯದ ಶಾಸಕ ಅಂಗಾರರು ಕೇವಲ ಸುಳ್ಯ ಕ್ಷೇತ್ರಕ್ಕೆ ಮಾತ್ರವಲ್ಲ ದ.ಕ. ಜಿಲ್ಲೆಗೆ ಬಂಗಾರವಾಗಿದ್ದಾರೆ. ಸುಳ್ಯ ಕ್ಷೇತ್ರ ಬಿಜೆಪಿಯ ಕಾಶಿ. ನಾನು ಸುಳ್ಯದ ಅಳಿಯ ನನ್ನ ಕ್ಷೇತ್ರದ ಆಡಳಿತದಲ್ಲಿ ತಪ್ಪು ಕಂಡು ಬಂದರೆ ತಿದ್ದುವ ಜವಬ್ದಾರಿ ಇಲ್ಲಿನ ಮತದಾರರಿಗಿದೆ. ನಾವು ೬ ಮಂದಿ ಶಾಸಕರು ಶಾಸನ ಸಭೆಗೆ ಹೊಸಬರು ನಾವು ಈಗಷ್ಟೇ ಎಲ್.ಕೆ.ಜಿ.ಯಲ್ಲಿದ್ದೇವೆ. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಸತತ6 ಬಾರಿ ಗೆದ್ದು ಶಾಸನಸಭೆ ಪ್ರವೇಶಿಸಿರುವ ಅಂಗಾರರ ಮಾರ್ಗದರ್ಶನದಲ್ಲಿ ನಾವು ಬಿಜೆಪಿ ವತಿಯಿಂದ ಗೆದ್ದಿರುವ ಎಲ್ಲಾ 7ಜನ ಶಾಸಕರು ಜಿಲ್ಲೆಯ ಅಭಿವೃದ್ಧಿಗಾಗಿ ಬದ್ಧರಾಗಿರುತ್ತೇವೆ ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ, ಪುತ್ತೂರಿನ ನೂತನ ಶಾಸಕರೂ ಆಗಿರುವ ಸಂಜೀವ ಮಠಂದೂರು ಹೇಳಿದರು.


ದ.ಕ. ಜಿಲ್ಲೆ ಸಾಮರಸ್ಯದ ಜಿಲ್ಲೆಯಾಗಬೇಕು. ಅಡಿಕೆ, ರಬ್ಬರ್ ಬೆಳೆಗಾರರ ಪರವಾಗಿ ಶಾಸನಸಭೆಯಲ್ಲಿ ಹೋರಾಟ ಮಾಡಬೇಕಾಗಿದೆ. ಸುಳ್ಯದಲ್ಲಿ ಪಕ್ಷದ ಕಾರ್ಯಕರ್ತರಲ್ಲಿರುವ ಬಿಡುವಿಲ್ಲದ ಶ್ರಮದಿಂದ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಶಾಶ್ವತವಾಗಿ ರಜೆ ನೀಡುವ ಕೆಲಸವನ್ನು ಮಾಡಿದೆ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.