ಶಾಸಕ ಅಂಗಾರರಿಗೆ ಸಂಸದ ಕಟೀಲ್ ಪ್ರಶಂಸೆ

Advt_Headding_Middle
Advt_Headding_Middle


6ಬಾರಿ ಶಾಸಕರಾದರೂ ಯಾವುದೇ ಅಹಂಕಾರ, ದರ್ಪ ಇಲ್ಲದೆ ಸಜ್ಜನಿಕೆಯ ರಾಜಕಾರಣ ಮಾಡುತ್ತಿರುವ ಎಸ್.ಅಂಗಾರರು ಇಡೀ ರಾಜ್ಯಕ್ಕೆ ಆದರ್ಶವಾದ ಶಾಸಕ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಪ್ರಶಂಸಿದ್ದಾರೆ. ಸುಳ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಮತ್ತು ಅಂಗಾರರು ಓಟಿಸಿ ಮೇಟ್ಸ್. ಅಂದಿನಿಂದ ಇಂದಿನವರೆಗೆ ಅವರ ರಾಜಕಾರಣವನ್ನು ಗಮನಿಸುತ್ತಿದ್ದೇನೆ. ಒಂದೇ ಒಂದು ಪಕ್ಷ ವಿರೋಧಿ ಹೇಳಿಕೆ ನೀಡಿದವರಲ್ಲ. ನಾವಾದರೂ ಭಾಷಣದಲ್ಲಿ ಕೆಲವೊಮ್ಮೆ ಏನಾದರೂ ಹೇಳಿಬಿಡುತ್ತೇವೆ. ಆದರೆ ಅಂಗಾರರು ಮಾತಿನಲ್ಲೂ ತಪ್ಪದ ವ್ಯಕ್ತಿ. ನಡವಳಿಕೆಯಲ್ಲೂ ಮಾದರಿಯಾದವರು. ಶುದ್ಧ ಹೃದಯದಿಂದ ಜನರ ಮನಸ್ಸು ಗೆದ್ದವರು ಎಂದು ಪ್ರಶಂಸೆಯ ಸರ್ಟಿಫಿಕೇಟ್ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.