ಎಸ್.ಜೆ.ಎಂ.ಬೈತಡ್ಕ ರೇಂಜ್ ವತಿಯಿಂದ ಉಚಿತ ವಸ್ತ್ರ, ಸಹಾಯಧನ ವಿತರಣೆ

Advt_Headding_Middle
Advt_Headding_Middle

ಬೆಳ್ಳಾರೆ: ಸುನ್ನೀ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ (ರಿ.) ಎಸ್.ಜೆ.ಎಂ.ಬೈತಡ್ಕ ರೇಂಜಿನ ಕಾರ್ಯಚಟುವಟಿಕೆಗಳು, ಸಾಂತ್ವನ ಕಾರ್ಯಕ್ರಮಗಳು ಇಡೀ ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಲಿ ಎಂದು ಇಸ್ಲಾಮಿಕ್ ಎಜ್ಯುಕೇಷನಲ್ ಬೋರ್ಡು ಆಫ್ ಇಂಡಿಯಾದ ಮುಫತ್ತಿಷ್ ಅಬ್ದುಲ್ ಹಮೀದ್ ಮಿಸ್ಬಾಹೀ ಸರಳಿಕಟ್ಟೆ ಅಭಿಪ್ರಾಯಪಟ್ಟರು. ಅವರು ಎಸ್.ಜೆ.ಎಂ. ಬೈತಡ್ಕ ರೇಂಜ್ ಇತ್ತೀಚೆಗೆ ನಡೆಸಿದ ಜಲ್ಸತುಲ್ ವಿದಾಅಃ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಐವತ್ತರಷ್ಟು ರೇಂಜ್ ಸಮಿತಿಗಳು ಕಾರ್ಯಾಚರಣೆ ಮಾಡುತ್ತಿದೆ. ಆದರೆ ಇಷ್ಟೊಂದು ಸೆಟ್ಟಪ್ಪ್ ಇರುವ, ಇಷ್ಟೊಂದು ರಿಲೀಫ್ ಕೆಲಸ ಮಾಡುವ, ಅಧ್ಯಾಪಕರ ಸುಂದರವಾದ ಸಮವಸ್ತ್ರ, ಅದ್ಯಾಪಕರ ಐಡಿಮಾರ್ಕ್ ಎಂ.ಎಸ್.ಆರ್. ಹಾಗೂ ಎಂ.ಎಸ್.ಸಿ. ಎಲ್ಲಾ ಮುಅಲ್ಲಿಮರು ಪಡೆದು ಶೇಕಡ ನೂರರಷ್ಟು ಯಶಸ್ವಿಯಾಗಿದ್ದು, ಪರೀಕ್ಷೆ, ವ್ಯಾಲಿವೇಷನ್, ಮದ್ರಸ ಹಾಗೂ ರೇಂಜ್ ಕಡತಗಳ ನಿರ್ವಹಣೆ ಹೀಗೆ ಎಲ್ಲಾ ವಿಷಯಗಳಲ್ಲೂ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಬೈತಡ್ಕ ರೇಂಜ್ ಇಡೀ ರಾಜ್ಯಕ್ಕೇ ಮಾದರಿಯಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈತಡ್ಕ ರೇಂಜ್ ಅಧ್ಯಕ್ಷ ಕೊಂಬಾಳಿ ಕೆ.ಎಂ.ಎಚ್.ಝುಹುರಿ ವಹಿಸಿದರು. ಕೂರತ್ ಅಲ್-ಫಝಲ್ ಮುದರ್ರಿಸ್ ಅಬ್ದುಲ್ ಖಾದರ್ ಹನೀಫೀ ಅಲ್-ಫಾಳಿಲಿ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಈ ಕಾರ್ಯಕ್ರಮದಲ್ಲಿ ಬೈತಡ್ಕ ರೇಂಜ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಸೀದಿ ಹಾಗೂ ಮದ್ರಸಗಳಲ್ಲಿ ಕರ್ತವ್ಯ ನಿರ್ವಹಿಸುವ ಮುದರ್ರಿಸ್, ಖತೀಬ್, ರೇಂಜ್ ಮುಫತ್ತಿಷ್ ಹಾಗೂ ಸದರ್ / ಮುಅಲ್ಲಿಮರಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು ಐವತ್ತಕ್ಕಿಂತಲೂ ಮಿಕ್ಕ ಅಧ್ಯಾಪಕರಿಗೆ ರಮಳಾನ್ ಪ್ರಯುಕ್ತ ಉಚಿತ ವಸ್ತ್ರ ವಿತರಣೆ ಹಾಗೂ ಎಲ್ಲಾ ಮುಅಲ್ಲಿಮರ ಕುಟುಂಬಕ್ಕೆ ಧನಸಹಾಯ ವಿತರಣೆ ಮಾಡಲಾಯಿತು. ಅನಾರೋಗದಲ್ಲಿರುವ ಅಧ್ಯಾಪಕರೊಬ್ಬರ ಮಗನ ಚಿಕಿತ್ಸೆಗಾಗಿ ಇಪ್ಪತ್ತೈದು ಸಾವಿರದ ಚೆಕ್ ವಿತರಣೆ ಹಾಗೂ ಮನೆ ನಿರ್ಮಾಣ ಕೆಲಸ ಆರಂಭಿಸಿದ ಎರಡು ಅಧ್ಯಾಪಕರಿಗೆ ಧನಸಹಾಯ ನೀಡಲಾಯಿತು. ಕೇಂದ್ರ ಸಮಿತಿ ನಡೆಸಿದ ಮದ್ರಸ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಆಯ್ದ ನಾಲ್ಕು ಮದ್ರಸದ ಮುಖ್ಯೋಪಾಧ್ಯಯರನ್ನು ಕ್ಯಾಷ್ ಅವಾರ್ಡ್ ಹಾಗೂ ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪಳ್ಳಿಮಜಲು ಜಮಾಅತ್ ಕಮಿಟಿ ಅಧ್ಯಕ್ಷ ಬಿ.ಇಬ್ರಾಹಿಂ ಬೀಡು, ಹಿರಿಯರಾದ ಅಬ್ಬಾಸ್ ಚಾಲ್ಕೆರೆ, ಎಸ್.ವೈ.ಎಸ್. ಬೆಳ್ಳಾರೆ ಸೆಂಟರ್ ಉಪಾಧ್ಯಕ್ಷ ಅಬ್ದುಲ್ ಹಮೀದ್ ಅಲ್ಫಾ ಮೊದಲಾದವರು ಉಪಸ್ಥಿತರಿದ್ದರು. ಬೈತಡ್ಕ ರೇಂಜ್ ಪ್ರ.ಕಾರ್ಯದರ್ಶಿ ಜಿ.ಕೆ.ಇಬ್ರಾಹಿಂ ಅಮ್ಜದಿ ಚೆನ್ನಾವರ ಸ್ವಾಗತಿಸಿ, ರೇಂಜ್ ಪರೀಕ್ಷಾ ವಿಭಾಗ ಕಾರ್ಯದರ್ಶಿ ಜಿ.ಎಂ.ಯೂಸುಫ್ ಮುಸ್ಲಿಯಾರ್ ಬೆಳ್ಳಾರೆ ವಂದಿಸಿದರು. ಕ್ಷೇಮನಿಧಿ ವಿಭಾಗ ಕಾರ್ಯದರ್ಶಿ ಸುಲೈಮಾನ್ ಸಅದಿ ಅಲೆಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.