HomePage_Banner
HomePage_Banner
HomePage_Banner
HomePage_Banner
Breaking News

ಪಂಜ ಜೇಸಿ ವತಿಯಿಂದ ಸೈನ್ಯಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ


ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್‌. ಎಸ್‌ ಘಟಕ ಮತ್ತು ಜೇಸಿಐ ಪಂಜ ಪಂಚಶ್ರೀಯ ಜಂಟಿ ಆಶ್ರಯದಲ್ಲಿ
ಸೈನ್ಯಕ್ಕೆ ಸೇರುವ ವಿದ್ಯಾರ್ಥಿಗಳಿಗಾಗಿ ಮಾಹಿತಿ ಕಾರ್ಯಾಗಾರವನ್ನು ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾ ಭವನದಲ್ಲಿ ಜೂ. ೪ ರಂದು ಮಾಜಿ ಸೈನಿಕ ಮತ್ತು ನಿವೃತ್ತ ಯುವಜನ ಮತ್ತು ಕ್ರೀಡಾಧಿಕಾರಿ ಬಿ.ಕೆ ಮಾಧವ ಗೌಡ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸೈನ್ಯಕ್ಕೆ ಸೇರಲು ಬೇಕಾದ ಅರ್ಹತೆ ಮತ್ತು ಅವಕಾಶಗಳನ್ನು ವಿಸ್ತ್ರತವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಗುರುಪ್ರಸಾದ್ ತೋಟ ವಹಿಸಿದ್ದರು.


ವೇದಿಕೆಯಲ್ಲಿ ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿಗಳಾದ ಗೋವಿಂದ ಕುಮಾರ್ ಕೆ, ವಿವೇಕ್ ಆಳ್ವ ಹಾಗೂ ಸಂಸ್ಥೆಯ ಎನ್.ಎಸ್‌. ಎಸ್‌ ಘಟಕದ ಕಾರ್ಯಕ್ರಮ ಆಧಿಕಾರಿ ಕಿರಣ್ ಕೆ.ಟಿ ಉಪಸ್ಥಿತಿತರಿದ್ದರು. ಗೋವಿಂದ ಕುಮಾರ್ ಕೆ ಸ್ವಾಗತಿಸಿ, ವಿವೇಕ್ ಆಳ್ವ ಪ್ರಾಸ್ತಾವಿಕ ಮಾತನ್ನಾಡಿದರು. ಕಿರಣ್ ಕೆ.ಟಿ ಧನ್ಯವಾದ ಸಮರ್ಪಸಿ, ಕೆ.ಎಸ್.ಜಿ.ಇ.ಟಿ ಕಾರ್ಯಕ್ರಮ ಅಧಿಕಾರಿ ಪ್ರಸನ್ನ ವೈ.ಟಿ ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.