ಶ್ರೀ ಕ್ಷೇ. ಧ. ಗ್ರಾ. ಯೋ. (ರಿ) ಸುಳ್ಯ ತಾಲೂಕಿನ ಯೋಜನಾಧಿಕಾರಿ ಸಂತೋಷ್‌ಕುಮಾರ್ ರೈಯವರಿಗೆ ಸರ್ವಶ್ರೇಷ್ಠ ಪ್ರಶಸ್ತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಸುಳ್ಯ ತಾಲೂಕಿನ ಯೋಜನಾಧಿಕಾರಿಯಾಗಿರುವ ಸಂತೋಷ್‌ಕುಮಾರ್ ರೈಯವರನ್ನು 2017-18 ನೇ ಸಾಲಿನ ಕ್ರಿಯಾ ಯೋಜನೆಯನ್ನು ಅತ್ಯುತ್ತಮವಾಗಿ ಅನುಷ್ಠಾನ ಮಾಡಿರುವುದಕ್ಕಾಗಿ ಸರ್ವಶ್ರೇಷ್ಠ ಯೋಜನಾಧಿಕಾರಿ ಎಂದು ಅಭಿನಂದಿಸಲಾಯಿತು.

ಸುಳ್ಯ ತಾಲೂಕಿನ ಯೋಜನಾಧಿಕಾರಿಯಾಗಿ ಅಧಿಕಾರ ವಹಿಸಿ ಕೊಂಡ ಪ್ರಥಮ ವರ್ಷದಲ್ಲಿ 56 ಕೋಟಿ ಪ್ರಗತಿನಿಧಿಯನ್ನು ವಿತರಿಸಲಾಗಿದೆ. ಕೃಷಿ ಅನುದಾನಗಳ ವಿತರಣೆ 13 ಲಕ್ಷ, 15181 ಸದಸ್ಯರ ಜನ್‌ಧನ್ ಖಾತೆಗಳನ್ನು ತೆರೆಯಲಾಗಿದೆ. 350  ಕುಟುಂಬಗಳು ಸೋಲಾರ್ ಅಳವಡಿಕೆ ಮಾಡಿಕೊಂಡಿರುತ್ತಾರೆ. ಪ್ರಧಾನ ಮಂತ್ರಿಯವರ ಸರಕಾರಿ ಯೋಜನೆಯಾದ PMJJBY &PMSBYಯನ್ನು 2738 ಸದಸ್ಯರು ಮಾಡಿಸಿಕೊಂಡಿರುತ್ತಾರೆ ಮತ್ತು 435  ಹೊಸ ಸಂಘಗಳ ರಚನೆಯೂ ಆಗಿರುತ್ತದೆ.

 


3225  ಕುಟುಂಬಗಳು ಮನೆ ರಿಪೇರಿಗಾಗಿ ಪ್ರಗತಿನಿಧಿ ಪಡೆದುಕೊಂಡಿರುತ್ತಾರೆ. ಅಲ್ಲದೆ 3310 ಕುಟುಂಬಗಳು ಶೌಚಾಲಯಗಳನ್ನು ಕಟ್ಟಿಸಿಕೊಂಡಿರುತ್ತಾರೆ. 115 ನಲ್ಲಿ ನೀರುಗಳ ಸ್ಥಾಪನೆ, 23 ಮಳೆಕೊಯ್ಲು ಘಟಕಗಳು, 51 ವಿದ್ಯಾರ್ಥಿಗಳಿಗೆ ಮಾಸಿಕ ಸುಜ್ಞಾನನಿಧಿ ಶಿಷ್ಯವೇತನ, ನಿರ್ಗತಿಕರ 56 ಕುಟುಂಬಗಳಿಗೆ 1,02,000/- ಮಾಸಾಶನ ವಿತರಣೆಯನ್ನು ಮಾಡಲಾಗಿದೆ. 10 ಲಕ್ಷ ವೆಚ್ಚದಜಿಲ್ಲಾ ಮಟ್ಟದ ಯಶಸ್ವಿ ಮಹಿಳಾ ಸಮ್ಮಿಲನ ಕಾರ್ಯಕ್ರಮ, ತಾಲೂಕಿನಲ್ಲಿ ಭಜನಾಕಮ್ಮಟ ಕಾರ್ಯಕ್ರಮಗಳು ಮುಂತಾದ ಉತ್ತಮ ಸಾಧನೆಗಳನ್ನು ಮಾಡಿ ಕೊಡಗು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ, ಉಡುಪಿ ಪ್ರಾದೇಶಿಕ ಕಛೇರಿಯ 31 ಯೋಜನಾ ಕಛೇರಿಗಳ ಪೈಕಿ 5ನೇ ಸ್ಥಾನ, ಹಾಗೂ ರಾಜ್ಯದ 148  ನೇ ಯೋಜನಾ ಕಛೇರಿಗಳಲ್ಲಿ 14 ನೇ ಸ್ಥಾನವನ್ನು ಪಡೆದುಕೊಂಡು ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈ ಎಲ್ಲಾಅತ್ಯುತ್ತಮ ಸಾಧನೆಗಳಿಗೆ “ಸರ್ವಶ್ರೇಷ್ಠ ಪ್ರಶಸ್ತಿ”ಯನ್ನು ಸುಳ್ಯ ತಾಲೂಕಿನ ಯೋಜನಾಧಿಕಾರಿ ಸಂತೋಷ್‌ಕುಮಾರ್ ರೈ ಇವರು ಮಂಗಳೂರು ಜಿಲ್ಲಾ ನಿರ್ದೇಶಕರಾದ ಚಂದಶೇಖರ ನೆಲ್ಯಾಡಿಯವರಿಂದ ಪಡೆದುಕೊಂಡರು. ಮತ್ತು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿರುವ ವಲಯಗಳ ಮೇಲ್ವಿಚಾರಕರುಗಳನು  ಕೂಡ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.