ಸುಳ್ಯ ದಲ್ಲಿ ವಿದ್ಯುತ್ ಬಳಕೆದಾರರ ಸಭೆ – 110ಕೆವಿ ಅನಷ್ಠಾನ ಸಮಿತಿ ಅಸ್ತಿತ್ವಕ್ಕೆ

ಸುಳ್ಯದ ವಿದ್ಯುತ್ ಸಮಸ್ಯೆಯನ್ನು ಚರ್ಚಿಸಲು ಬಳಕೆದಾರರ ಸಭೆಯು ನ್ಯಾಯವಾದಿ ಎಂ. ವೆಂಕಪ್ಪ ಗೌಡ ಸಂಪಾಜೆ ಗ್ರಾ.ಪಂ. ಸದಸ್ಯ ಜಿ.ಕೆ.ಹಮೀದ್‌ರವರ ನೇತೃತ್ವದಲ್ಲಿ ಇಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಿತು. ಸಭೆಯಲ್ಲಿ ಸುಮಾರು ೫೦ರಷ್ಟು ಮಂದಿ ವಿದ್ಯುತ್ ಬಳಕೆದಾರರು ಭಾಗವಹಿಸಿದ್ದರು. ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಪಿ.ಜಾನಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ವೇದಿಕೆಯಲ್ಲಿದ್ದರು.

ಸಭೆಗೆ ಆಗಮಿಸಿದ ವಿದ್ಯುತ್ ಬಳಕೆದಾರರು ಅಭಿಪ್ರಾಯ ವ್ಯಕ್ತ ಪಡಿಸಿದರು. ಬಳಿಕ ವಿದ್ಯುತ್ 110 ಕೆವಿ ವಿದ್ಯುತ್ ಅನುಷ್ಠಾನ ಸಮಿತಿಯನ್ನು ರಚಿಸಲಾಯಿತು.

ಸಂಚಾಲಕರುಗಳಾಗಿ ಜಿ.ಕೆ.ಹಮೀದ್, ದಿನೇಶ್ ಮಡಪ್ಪಾಡಿ, ಪಿ.ಎಸ್.ಗಂಗಾಧರ್, ಕೆ.ಪಿ.ಜಾನಿ, ಸತ್ಯಕುಮಾರ್ ಆಡಿಂಜ, ಸುಧೀರ್ ರೈ ಮೇನಾಲ ಪತ್ರಕರ್ತರ ಪರವಾಗಿ ಜಯಪ್ರಕಾಶ್ ಕುಕ್ಕೇಟಿ, ದಿನೇಶ್ ಅಂಬೆಕಲ್ಲು, ಶಶಿಧರ ಎಂ.ಜೆ., ಆರ್.ಕೆ. ಮಹಮ್ಮದ್‌ರನ್ನು ಆಯ್ಕೆ ಮಾಡಲಾಯಿತು. ಸಮನ್ವಯಗಾರರಾಗಿ ನ್ಯಾಯವಾದಿ ಎಂ. ವೆಂಕಪ್ಪ ಗೌಡರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಲಾಯಿತು. ಸಭೆಯಲ್ಲಿ ಬಂದ ಅಭಿಪ್ರಾಯದಂತೆ ಶಾಸಕ ಅಂಗಾರರನ್ನು ಭೇಟಿಯಾಗಿ ಅವರ ಮುಂದಾಳುತ್ವದಲ್ಲಿ 110 ಕೆವಿ ಕುರಿತು ಚರ್ಚೆ ನಡೆಸುವ ಬಗ್ಗೆ ಸಭೆ ನಿರ್ಧರಿಸಿತು. ಭವಾನಿಶಂಕರ ಕಲ್ಮಡ್ಕ ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.