Breaking News

ಜಾಲ್ಸೂರು : ಅಸೌಖ್ಯದಿಂದ ವಿದ್ಯಾರ್ಥಿನಿ ಮೃತ್ಯು


ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಜೂ. 18ರಂದು ನಡೆದಿದೆ.

ಜಾಲ್ಸೂರು ಗ್ರಾಮದ ಕೋನಡ್ಕ ಪದವು – ಅಡ್ಕಾರುಬೈಲು ನಿವಾಸಿ ಶ್ರೀಧರ ಪಾಟಾಳಿ- ವಿಜಯಲಕ್ಷ್ಮಿ ದಂಪತಿಗಳ ಪುತ್ರಿ ಅಶ್ವಿನಿ ಮೃತಪಟ್ಟ ಯುವತಿ. 3 ತಿಂಗಳ ಹಿಂದೆ ಅಸೌಖ್ಯಕ್ಕೊಳಗಾದ ಇವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ 2 ಕಿಡ್ನಿಯೂ ಫೈಲೂರು ಆಗಿರುವುದು ತಿಳಿದು ವಾರದಲ್ಲಿ 2 ದಿನ ಡಯಾಲಿಸಿಸ್ ಆರಂಭಿಸಲಾಯಿತು. ಒಂದು ತಿಂಗಳ ಕಾಲ ಡಯಾಲಿಸಿಸ್ ಮಾಡಿ ಬಳಿಕ ಅಶ್ವಿನಿ ಚೇತರಿಸಿಕೊಂಡಿದ್ದರು. ಬಳಿಕ ಮನೆಯವರು ಆಕೆಗೆ ಹಳ್ಳಿಮದ್ದು ಮಾಡುವ ಉದ್ಧೇಶದಿಂದ ಸಾಗರಕ್ಕೆ ಕರೆದೊಯ್ದಿದ್ದರು. ಮೃತಪಡುವ 2 ದಿನಗಳ ಹಿಂದೆ ಆಕೆ ತೀವ್ರ ಅಸೌಖ್ಯಕ್ಕೊಳಗಾಗಿದ್ದರು. ಮನೆಯವರು ಆಕೆಯನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಾದರೂ ಫಲಕಾರಿಯಾಗದೆ ಜೂ. 18ರಂದು ಮಧ್ಯಾಹ್ನ ಮೃತಪಟ್ಟರು.

ಮೃತರು ತಂದೆ ತಾಯಿ, ಸಹೋದರರಾದ ಅಶ್ವಿಥ್ ಎ., ರಕ್ಷಿತ್ ಎ., ಸಹೋದರಿ ಪ್ರಿಯಾ ಎ. ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಅಶ್ವಿನಿ 2017-18 ನೇ ಸಾಲಿನಲ್ಲಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಳು. ಈ ಬಾರಿ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ ಪದವಿ (ಬಿಎ) ವಿದ್ಯಾಭ್ಯಾಸಕ್ಕೆ ದಾಖಲಾತಿ ಪಡೆದಿದ್ದಳು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.