ಅಭಿವೃದ್ಧಿಯಲ್ಲಿ ನಂ.೧ ದೇಶ ಭಾರತ : ಕಟೀಲ್

“ಈ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಹಲವಾರು ಜನಪರ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಇಡೀ ವಿಶ್ವವೇ ಭಾರತದತ್ತ ಕಣ್ಣೆತ್ತಿ ನೋಡುವಂತೆ ಮಾಡಿದ್ದಾರೆ. ಇಂದು ವಿಶ್ವದಲ್ಲೇ ಭಾರತ ಅಭಿವೃದ್ಧಿಯಲ್ಲಿ ನಂ೧ ಸ್ಥಾನ ದತ್ತ ದಾಪುಗಾಲಿಟ್ಟಿದೆ“ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಜೂ.೨೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಯೋಗ ದಿನವನ್ನು ಆಚರಿಸುವ ಮೂಲಕ ಭಾರತೀಯ ಸಂಸ್ಕೃತಿಗೆ ವಿಶೇಷ ಸ್ಥಾನ ಕೊಟ್ಟವರು ನರೇಂದ್ರ ಮೋದಿಯವರು ಹೀಗೆ, ಸರ್ಜಿಕಲ್ ಸ್ಟ್ರೈಕ್ ಮೂಲಕ ಇಲ್ಲಿನ ಸೈನಿಕ ಶಕ್ತಿ ಏನೆಂಬುದನ್ನು ತೋರಿಸಿದ್ದಾರೆ. ಅಧಿಕಾರಕ್ಕೆ ಬರುವಾಗ ೧೮ ಸಾವಿರ ಗ್ರಾಮಗಳು ಕತ್ತಲೆಯಂಚಿನಲ್ಲಿದ್ದವು ಅವುಗಳಿಗೆಲ್ಲ ವಿದ್ಯುತ್ ಸಂಪರ್ಕವನ್ನು ನೀಡುವ ಮೂಲಕ ಸಮಸ್ಯೆ ಪರಿಹರಿಸಿದ್ದಾರೆ. ಸ್ವಚ್ಛ ಗ್ರಾಮ ಪರಿಕಲೊನೆಯಡಿಯಲ್ಲಿ ನಾಲ್ಕೂವರೆ ಕೋಟಿ ಶೌಚಾಲಯವನ್ನು ನಿರ್ಮಿಸಿದ್ದಾರೆ. ಮುದ್ರಾ ಯೋಜನೆಯನ್ನು ಜಾರಿಗೆ ತರುವ ಮುಖಾಂತರ ೯ ಕೋಟಿ ಉದ್ಯೋಗ ನಿರ್ಮಾಣ ಮಾಡದ್ದಾರೆ. ಉಜ್ವಲ ಯೋಜನೆಯನ್ನು ಜಾರಿಗೆ ತಂದು ಮೂರೂವರೆ ಕೋಟಿ ಗ್ಯಾಸ್ ಸಂಪರ್ಕವನ್ನು ಬಡವರಿಗೆ ಕೊಡುವಲ್ಲಿ ಯಶಸ್ವಿಯಾಗಿವೆ. ಜನೌಷಧಿ ಕೇಂದ್ರಗಳ ಮೂಲಕ ಕಡಿಮೆ ಬೆಲೆಗೆ ಔಷಧಿಗಳು, ಡಿಜಿಟಲ್ ಇಂಡಿಯಾ ಪರಿಕಲ್ಪನೆಯಲ್ಲಿ ಆಗುತ್ತಿರುವ ಬದಲಾವಣೆಗಳು ಹೀಗೆ ಭಾರತ ದಿನದಿಂದ ದಿನಕ್ಕೆ ಬದಲಾವಣೆಯಲ್ಲಿದೆ ಎಂದು ಸಂಸದರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಅಂಗಾರ, ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಎ.ವಿ.ತೀರ್ಥರಾಮ, ನವೀನ್ ರೈ ಮೇನಾಲ, ಕೃಪಾ ಶಂಕರ ತುದಿಯಡ್ಕ, ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ ಗೌಡ, ತಾ.ಪಂ ಸದಸ್ಯೆ ಪುಷ್ಪಾ ಮೇದಪ್ಪ, ಮಹೇಶ್ ರೈ ಮೇನಾಲ, ಸುರೇಶ್ ಕಣೆಮರಡ್ಕ ಉಪಸ್ಥಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.