ಮೂರು ತಿಂಗಳಲ್ಲಿ ರಾಜ್ಯ ಸರಕಾರ ಪತನ : ಸಂಸದ ನಳಿನ್ ಕಟೀಲ್

“ಕುಮಾರ ಸ್ವಾಮಿ ಮತ್ತು ಪರಮೇಶ್ವರ್‌ರದ್ದು ಗುರು ಹಿರಿಯರಿದ್ದು ಆದ ಮದುವೆ. ಈಗ ಅವರೊಳಗೆ ಒಳ ಜಗಳ ಆರಂಭಗೊಂಡಿದ್ದು ಡೈವರ್ಸ್ ಹಂತಕ್ಕೆ ಬಂದಿದೆ. ಅದರಲ್ಲೂ ಕುಮಾರಸ್ವಾಮಿಯವರು ಡೈವಸ್‌ಗೆ ಅರ್ಜಿ ಕೂಡಾ ಹಾಕಿದ್ದಾರೆ. ಐಸಿಯುವಿನಲ್ಲಿರುವ ಈ ಸರಕಾರ ಮೂರೆ ತಿಂಗಳಲ್ಲಿ ಪತನವಾಗುತ್ತದೆ“ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಜೂ.೨೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ದ.ಕ. ಜಿಲ್ಲೆಯಲ್ಲಿ ಮಳೆ ವಿಪರೀತವಾಗಿದ್ದು ಕೊಚ್ಚಿ ಹೋಗುವ ಹಂತದಲ್ಲಿದೆ. ಆದರೆ ಸರಕಾರ ಇತ್ತ ಕಡೆ ನೋಡದೆ ಕಣ್ಣು ಮುಚ್ಚಿ ಕುಳಿತಂತಿದೆ. ಇಲ್ಲಿಯ ಸಮಸ್ಯೆಗಳಿಗೆ ಅನುದಾನವನ್ನು ನೀಡುತ್ತಿಲ್ಲ. ಸರಕಾರ ಅನುದಾನವನ್ನು ನೀಡದಿರುವುದರಿಂದ ಅಧಿಕಾರಿಗಳು ಕೂಡ ಕೆಲಸ ಮಾಡಲು ಭಯ ಪಡುತ್ತಿದ್ದಾರೆ. ಈ ಸರಕಾರ ವರ್ಗಾವಣೆ, ಪ್ರಮೋಷನ್, ಜತೆಗೆ ಕಮಿಷನ್ ತೆಗೆದುಕೊಳ್ಳುವುದರಲ್ಲೇ ಕಾಲಕಳೆಯುತ್ತಿದೆ” ಎಂದು ಹೇಳಿದರು.
ಜಿಲ್ಲೆಯಲ್ಲಿ ಮರಳು ಸಮಸ್ಯೆ : ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಮರಳು ಮಾಫಿಯ ನಡೆಸಿತ್ತು. ಇದರಿಂದಾಗಿ ಈಗ ಮರಳಿನ ಅಭಾವ ಹೆಚ್ಚಾಗಿದೆ. ಬಡವ ಮನೆ ಕಟ್ಟಲು ಕಷ್ಟ ಪಡುವ ಸ್ಥಿತಿ ಇದೆ. ಈ ಬಾರಿಯಾದರು ಸರಕಾರ ಮರಳು ನೀತಿಯನ್ನು ಸಡಿಲಗೊಳಿಸಬೇಕು ಎಂದು ಸಂಸದರು ಹೇಳಿದರು.
ರೈಲು ಮಾರ್ಗ ಶೀಘ್ರ ಸಭೆ : ಕಾಣಿಯೂರು-ಕಾಂಞಾಗಾಡ್ ರೈಲು ಮಾರ್ಗದ ಕುರಿತು ಈಗಾಲೇ ಡಿ.ವಿ.ಸದಾನಂದ ಗೌಡರ ಮುಂದಾಳತ್ವದಲ್ಲೇ ಸಂಬಂಧ ಪಟ್ಟ ಸಚಿವರ ಜತೆ ಮಾತುಕತೆ ಮಾಡಲಾಗಿದೆ. ಕಾಸರಗೋಡು ಸಂಸದರು ಮತ್ತು ನಾವು ಸೇರಿಕೊಂಡು, ಡಿ.ವಿ.ಸದಾನಂದ ಗೌಡರಿದ್ದು ಸುಳ್ಯದಲ್ಲಿ ಈ ಬಗ್ಗೆ ಚರ್ಚಿಸಲು ಸಭೆ ನಡೆಸುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸಂಸದರು ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಅಂಗಾರ, ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಎ.ವಿ.ತೀರ್ಥರಾಮ, ನವೀನ್ ರೈ ಮೇನಾಲ, ಕೃಪಾ ಶಂಕರ ತುದಿಯಡ್ಕ, ಆಶಾ ತಿಮ್ಮಪ್ಪ ಗೌಡ, ಪುಷ್ಪಾ ಮೇದಪ್ಪ, ಮಹೇಶ್ ರೈ ಮೇನಾಲ, ಸುರೇಶ್ ಕಣೆಮರಡ್ಕ ಉಪಸ್ಥಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.