ಯಾವುದೇ ಚುನಾವಣೆಗೂ ನಾನು ಅಭ್ಯರ್ಥಿ ಆಕಾಂಕ್ಷಿಯಲ್ಲ : ಕಟೀಲ್

“ಇದುವರೆಗೂ ನಾನು ಯಾವುದೇ ಚುನಾವಣೆಗೂ ಆಕಾಂಕ್ಷಿಯಲ್ಲ. ಪಕ್ಷ ಮತ್ತು ಹಿರಿಯರು ನೀಡಿದ ಸೂಚನೆಯನ್ನು ನಾನು ಪಾಲಿಸಿzನೆ. ಮುಂದೆಯೂ ಅದೇ ರೀತಿ ನಡೆಯುತ್ತೇನೆ“ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಜೂ.೨೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. “ ಅಭ್ಯರ್ಥಿಯ ಆಯ್ಕೆ ಅದು ಪಕ್ಷದ ತೀರ್ಮಾನ. ನಾವು ಅದರಲ್ಲಿ ಮಾತನಾಡುವುದಿಲ್ಲ. ಪಕ್ಷ ಯಾರನ್ನು ಸೂಚಿಸುತ್ತದೆ ಅವರೇ ಅಭ್ಯರ್ಥಿ. ನಾವು ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇವೆ“ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನಿಮ್ಮ ಹೆಸರು ಬಲವಾಗಿ ಕೇಳಿಬರುತ್ತಿತ್ತೆಂಬ ಪ್ರಶ್ನೆಗೆ ಉತ್ತರಿಸಿದ ಸಂಸದರು “ರಾಜ್ಯಾಧ್ಯಕ್ಷ ಹುದ್ದೆಗೆ ನಾನು ಆಕಾಂಕ್ಷಿಯಲ್ಲ“ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಅಂಗಾರ, ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಎ.ವಿ.ತೀರ್ಥರಾಮ, ನವೀನ್ ರೈ ಮೇನಾಲ, ಕೃಪಾ ಶಂಕರ ತುದಿಯಡ್ಕ, ಆಶಾ ತಿಮ್ಮಪ್ಪ ಗೌಡ, ಪುಷ್ಪಾ ಮೇದಪ್ಪ, ಮಹೇಶ್ ರೈ ಮೇನಾಲ, ಸುರೇಶ್ ಕಣೆಮರಡ್ಕ ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.