HomePage_Banner
HomePage_Banner
HomePage_Banner
Breaking News

ಕೃಷಿ ಮಾಹಿತಿ

ತಾಲೂಕಿನ ಕೃಷಿಕರಿಗೆ ತೋಟಗಾರಿಕಾ ಇಲಾಖೆಯಿಂದ ವಿವಿಧ ಯೋಜನೆಯಡಿಯಲ್ಲಿ ಸಹಾಯ ಧನ ಹಾಗೂ ಗಿಡಗಳ ವಿತರಣೆ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ತಾಲೂಕು ಪಂಚಾಯತ್ ಯೋಜನೆಯಡಿ ಪ.ಜಾತಿ / ಪ.ಪಂಗಡ ರೈತರಿಗೆ 2/1 ಎಕ್ರೆಗೆ ತೆಂಗಿನ ತೋಟ ಸ್ಥಾಪನೆಗೆ ಸಹಾಯ ಧನ ನೀಡಲಾಗುವುದು ಆಸಕ್ತ ರೈತರು ಈ ಯೋಜನೆಯಡಿ ನೋಂದಾಯಿಸಿಕೊಂಡು ಗ್ರಾಮ ಪಂಚಾಯತ್ ಅಧ್ಯಕ್ಷ / ತಾಲೂಕು ಪಂಚಾಯತ್ ಸದಸ್ಯರ ಶಿಫಾರಸ್ಸಿನೊಂದಿಗೆ ಅರ್ಜಿ, ಆರ್.ಟಿ.ಸಿ. ಜಾತಿ ಪ್ರಮಾಣ ಪತ್ರ ನೀಡುವುದು.
ತೆಂಗಿನ ಗಿಡ : ತಾ.ಪಂ.ನಲ್ಲಿ ಅನುಮೋ ದನೆಗೊಂಡ ರೈತರಿಗೆ 30 ತೆಂಗಿನ ಗಿಡಗಳನ್ನು ಉಚಿತವಾಗಿ ನೀಡಲಾಗುವುದು. ಹಾಗೂ mgnrega ಯೋಜನೆಯಡಿ ಕೂಲಿ ವೆಚ್ಚ ಪಡೆಯಬಹುದು.

ಗಿಡ ವಿತರಣೆ : ತಾಲೂಕು ಪಂಚಾಯತ್ ಯೋಜನೆಯಡಿ ಪ.ಪಂಗಡ ರೈತರಿಗೆ ಮನೆ ಮುಂದೆ ನಡೆಲು 2-3 ಗಿಡ್ಡ ತಳಿಯ ತೆಂಗಿನ ಸಸಿ ವಿತರಣೆ ನೀಡಲಾಗುವುದು ಆಸಕ್ತ ರೈತರು ತೆಂಗಿನ ಸಸಿಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿ.ಪಂ. ಸುಳ್ಯ ಕಛೇರಿಯಲ್ಲಿ ಹೆಸರು ನೀಡಬಹುದು. ತಾ.ಪಂ.ನಲ್ಲಿ ಅನುಮೋದನೆಯಾದ ರೈತರು ಉಚಿತವಾಗಿ ಗಿಡ ಪಡೆದು ಗುಂಡಿಗೆ mgnrega ಯೋಜನೆಯಡಿ ಕೂಲಿ ವೆಚ್ಚ ಪಡೆಯಬಹುದು.

ಗೇರು-ಕೊಕ್ಕೊಗಿಡ ಲಭ್ಯ: ತಾಲೂಕು ಪಂಚಾಯತ್ ಯೋಜನೆಯಡಿ ರೈತರಿಗೆ ಗೇರು ಹಾಗೂ ಕೊಕ್ಕೋ ಗಡಿಗಳು ಲಭ್ಯವಿದ್ದು, ಫಲಾನುಭವಿಗಳು ಉದ್ಯೋಗ ಖಾತರಿ ಯೋಜನೆಯಡಿ ಅರ್ಜಿ ಸಲ್ಲಿಸಿ ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಆರ್.ಟಿ.ಸಿ., ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡದ ರೈತರು ಜಾತಿ ಪ್ರಮಾಣ ಪತ್ರ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ/ ತಾಲೂಕು ಪಂಚಾಯತ್ ಸದಸ್ಯರ ಶಿಫಾರಸ್ಸಿನೊಂದಿಗೆ ಅರ್ಜಿ ನೀಡಿ ಉಚಿತವಾಗಿ ಗಿಡಗಳನ್ನು ಪಡೆದುಕೊಳ್ಳುವಂತೆ ಕೋರಿದೆ.

ಸಹಾಯಧನ : ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ೨೦೧೮-೧೯ಸಾಲಿನಲ್ಲಿ ಹೊಸದಾಗಿ ಗೇರು ಪ್ರದೇಶ ವಿಸ್ತರಣೆ ಮಾಡುವ ರೈತರಿಗೆ ಹೆಕ್ಟೇರ್‌ಗೆ 26,೦5೦/ ಸಹಾಯಧನ ಹಾಗೂ ನಿರ್ವಹಣೆಗೆ ಹೆಕ್ಟೇರ್‌ಗೆ 10,810/ ರೂ ಸಹಾಯಧನವನ್ನು ತೋಟಗಾರಿಕಾ ಇಲಾಖಾ ವತಿಯಿಂದ ನೀಡಲಾಗುವುದು. ರೈತರು ತಮ್ಮ ಅರ್ಜಿಯೊಂದಿಗೆ ಇಲಾಖೆಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಕೋರಲಾಗಿದೆ.
ಸಮಗ್ರ ತೋಟಗಾರಿಕೆ ಅಬಿವೃದ್ಧಿ ಯೋಜನೆಯಡಿ2018-19ನೇ ಸಾಲಿನಲ್ಲಿ ಕಲ್ಮಡ್ಕ ಮತ್ತು ಪಂಬೆತ್ತಾಡಿ ಗ್ರಾಮದ ರೈತರು ಹೊಸದಾಗಿ ಕಾಳುಮೆಣಸು ಪ್ರದೇಶ ವಿಸ್ತರಣೆ ಹಾಗೂ ನಿರ್ವಹಣೆಗೆ ಮಾಡುವ ರೈತರಿಗೆ 5೦,೦೦೦ ಸಹಾಯಧನವನ್ನು ತೋಟಗಾರಿಕಾ ಇಲಾಖಾ ವತಿಯಿಂದ ನೀಡಲಾಗುವುದು. ಆಸಕ್ತ ರೈತರು ಇಲಾಖೆಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಕೋರಿದೆ.
ಜೇನುಪಟ್ಟಿಗೆ ಸಹಾಯಧನ : ತೋಟಗಾರಿಕೆ ಇಲಾಖೆಯಿಂದ ಜೇನು ಕೃಷಿ ತರಬೇತಿಗೆ ಮತ್ತು ಜೇನುಪೆಟ್ಟಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಿದೆ. 2018-19 ಸಾಲಿನಲ್ಲಿ ಜೇನುಪೆಟ್ಟಿಗೆ ಮತ್ತು ಜೇನು ಕುಟುಂಬಗಳಿಗೆ ಸಹಾಯಧನವಿದ್ದು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ 90 % ಮತ್ತು ಇತರರಿಗೆ 40% ಸಹಾಯಧನ ನೀಡಲಾಗುವುದು. ಜೇನು ಪೆಟ್ಟಿಗೆ ಬೇಕಾದವರು ತಮ್ಮ ಹೆಸರುಗಳನ್ನು ತೋಟಗಾರಿಕೆ ಇಲಾಖೆ ಕಛೇರಿಯಲ್ಲಿ ಹೆಸರು ನೋಂದಾಯಿಸಿಕೊಂಡು ಜೇನು ಪೆಟ್ಟಿಗೆ ಖರೀದಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ 08257- 232020  ಹಾಗೂ 9980199738 ಕ್ಕೆ ಸಂಪರ್ಕಿಸಬಹುದಾಗಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.