ಗುತ್ತಿಗಾರು: ತರಕಾರಿ ಬೀಜ ವಿತರಣೆ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ -ಮಂಗಳೂ, ವಿಜಯ ಗ್ರಾಮೀಣ ಸಮಿತಿ ನಾಲ್ಕೂರು ಇದರ ಆಶ್ರಯದಲ್ಲಿ ಗುತ್ತಿಗಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ರಚನೆ ಮತ್ತು ತರಕಾರಿ ಬೀಜ ವಿತರಣೆ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ ವಿಜಯ ಗ್ರಾಮ ಸಮಿತಿ ನಾಲ್ಕೂರು ಇದರ ಅಧ್ಯಕ್ಷ ಡಿ.ಆರ್. ಉದಯಕುಮಾರ್ ದೇರಪ್ಪಜನಮನೆ ಇವರು, ಶಾಲೆಗಳಲ್ಲಿ ವಿದ್ಯಾರ್ಥಿ ಸಂಘ ರಚಿಸಿ ಅವರಲ್ಲೂ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿಸುವ ಕೆಲಸ ಮಾಡುತ್ತಿದ್ದೇವೆ. ಕೃಷಿಯ ಬಗ್ಗೆ ನಿಮ್ಮಲ್ಲಿ ಗೊಂದಲಗಳಿದ್ದರೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡುವ ಕೆಲಸವನ್ನು ಪ್ರತಿಷ್ಠಾನ ವತಿಯಿಂದ ಮಾಡುತ್ತೇವೆ ಎಂದರು.
ವಿದ್ಯಾರ್ಥಿ ಸಂಘದ ಮುಖ್ಯಸ್ಥೆ ತೇಜಮ್ಮರವರು ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಸಂಘಟಕ ದಿನೇಶ್ ಹಾಲೆಮಜಲು ಪ್ರಸ್ತಾವಿಕ ಮಾತನಾಡಿ ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಇನ್ನಷ್ಟು ಕೆಲಸ ಕಾರ‍್ಯಗಳನ್ನು ನಡೆಸಲಾಗುವುದು ಎಂದರು. ಶಿಕ್ಷಕ ದಯಾನಂದ ಮುತ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವೀಣಾ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರತ್, ಉಪಾಧ್ಯಕ್ಷೆ ದೇವಿಕಾ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳು ತರಕಾರಿ ತೋಟದಲ್ಲಿ ಬೀಜ ಬಿತ್ತನೆ ಮಾಡಿದರು. ಮನೆಗೂ ಬೀಜ ಕೊಂಡೊಯ್ದು ನಾಟಿ ಮಾಡುವ ಯೋಜನೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.