HomePage_Banner
HomePage_Banner
HomePage_Banner

ಪಂಜ: ಚರಂಡಿಗೆ ಬಿದ್ದು ನರಳಾಡುತ್ತಿದ್ದ ಮಹಿಳೆಯ ರಕ್ಷಣೆ-ಆಸ್ಪತ್ರೆಗೆ ದಾಖಲು

ಚರಂಡಿಗೆ ಬಿದ್ದು ಮೇಲಕ್ಕೇಳಲಾಗದೆ ನರಳಾಡುತ್ತಿದ್ದ ಅಶಕ್ತ ಮಹಿಳೆಯನ್ನು ಮೇಲಕ್ಕೆತ್ತಿ ಜೀವ ಉಳಿಸಿದ ಘಟನೆ ಜು. 24  ರಂದು ಪಂಜದಿಂದ ವರದಿಯಾಗಿದೆ.

ಪಂಜ ನಾಯರ್‌ಕೆರೆ ಚಂದ್ರಾವತಿ ಎಂಬವರು ಅವಿವಾಹಿತರಾಗಿದ್ದು, ಇತ್ತೀಚಿನ ಕೆಲವು ವರುಷಗಳಿಂದ ಕುಟುಂಬಸ್ಥರೊಂದಿಗೆ ಸೇರದೆ ಒಂಟಿಯಾಗಿ ಅವರ ಜಾಗದಲ್ಲಿ ಜೋಪಡಿ ನಿರ್ಮಿಸಿ ವಾಸಿಸುತ್ತಿದ್ದರು.ಈಗ ಅವರಿಗೆ ಸುಮಾರು ೬೭ ವರುಷ ವಯಸ್ಸಾಗಿದ್ದು ಇತ್ತೀಚೆಗೆ ಒಂದು ಕಾಲು ನೋವಿನಿಂದ ಬಳಲುತ್ತಿದ್ದು.ಅವರು ಯಾರ ಸಹಾಯವನ್ನು ಯಾಚಿಸದೆ ಮೆಲ್ಲಮೆಲ್ಲನೆ ನಡೆದು ಅವರ ಜೋಪಡಿಗೆ ದೂರದಿಂದ ನೀರು ತರುತ್ತಿದ್ದರು,ಪೇಟೆಗೆ ಹೋಗಿ ಆಹಾರ ವಸ್ತುಗಳನ್ನು ತಂದು ಜೀವಿಸುತ್ತಿದ್ದರು.ಕೇವಲ ಒಂದು ಣ್ಣ ಟಾರ್ಪಲಿಂದ ಜೋಪಡಿ ನಿರ್ಮಿಸಿದ್ದು,ಈ ವರುಷ ಸುರಿದ ಗಾಳಿ ಮಳೆಗೆ ಅವರು ಅರ್ಧಂಬರ್ಧ ಒದ್ದೆಯಾಗಿ ಕೊಂಡು ಅದರೊಳಗೆ ದಿನ ಕಳೆಯುತ್ತಿದ್ದರು.ಕಳೆದ ವಾರದಿಂದ ಅವರು ಜ್ವರದಿಂದ ಬಳಲುತ್ತಿದ್ದು ಅರಿಗೆ ಸಮೀಪದ ಮನೆಗಳ ಮಹಿಳೆಯರು ಊಟ,ತಿಂಡಿ ನೀಡಿ ನೆರವಾದರು.ಆದರೆ ಜು.೨೨ರಂದು ಅವರು ಸಂಪೂರ್ಣ ಅಶಕ್ತರಾಗಿ ನಡೆದಾಡಲಾಗದೆ ಗಂಭೀರ ಸ್ಥಿತಿಗೆ ತಲುಪಿದರು.

ಜು.೨೩ರಂದು ರಾತ್ರಿ ಅವರು ನಡೆದಾಡಲು ಯತ್ನಿಸಿ ಜೋಪಡಿಯ ಹತ್ತಿರದಲ್ಲಿ ತುಂಬಿ ಹರಿಯುತ್ತಿರುವ ಚರಂಡಿಗೆ ಬಿದ್ದಿದ್ದಾರೆ.ರಾತ್ರಿಯಿಡೀ ನೀರಿನಲ್ಲಿಯೇ ಕಳೆದ ಅವರನ್ನು ಮರುದಿನ ಬೆಳಿಗ್ಗೆ ಗಮನಿಸಿದ ಊರವರು ಗ್ರಾಮ ಪಂಚಾಯತ್‌ಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣವೇ ಗ್ರಾಮ ಪಂಚಾಯತ್‌ನವರು ಸ್ಥಳಕ್ಕೆ ಬಂದಿದ್ದಾರೆ.

ಸ್ಥಳೀಯ ಮಹಿಳೆಯರು ಅವರನ್ನು ನೀರಿನಿಂದ ಮೇಲಕ್ಕೆತ್ತಿ ,ಅಲ್ಲೇ ಸಮೀಪದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೂರಿಸಿದರು. ಮೈಯೆಲ್ಲ ಕೆಸರಾಗಿದ್ದ ಅವರನ್ನು ಬಿಸಿ ನೀರಿನಿಂದ ತೊಳೆದರು,ವಿವಸ್ತ್ರವಾಗಿದ್ದ ಅವರಿಗೆ ಬಟ್ಟೆ ತೊಡಿಸಿದರು.ಅವರ ಮೈ ತುಂಬ ಹುಣ್ಣಾಗಿದ್ದು,ಮಾತಾಡಲು ಆಗುತಿತ್ತ್ತು,ಆದರೆ ನಡೆದಾಡಲು ಶಕ್ತಿ ಇರಲಿಲ್ಲ.ಬಳಿಕ ಅವರನ್ನು ರಿಕ್ಷಾದಲ್ಲಿ ಪಂಜ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.ಅಲ್ಲಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಅಂಬ್ಯುಲೆನ್ಸ್‌ನಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚರಂಡಿ ಪಾಲಾಗುತ್ತಿದ್ದ ಅವರನ್ನು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ‍್ಯಪ್ಪ ಗೌಡ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿಯವರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ,ಸದಸ್ಯರಾದ ಲೋಕೇಶ್ ಬರೆಮೇಲು ,ಲಿಗೋಧರ ಆಚಾರ್ಯ,ಗ್ರಾ.ಪಂ.ಸದಸ್ಯರುಮತ್ತು ಪರಿಸರದವರು ಸಹಕರಿಸಿ ಎಲ್ಲರೂ ಮಾನವಿಯತೆ ಮೆರೆದಿದ್ದಾರೆ.ಈಗ ಸುಳ್ಯದ ಆಸ್ಪತ್ರೆಯಲ್ಲಿ ಒಂಟಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ,ಪ್ರಕರಣದ ಕುರಿತು ಪರಿಶೀಲಿಸುವುದಾಗಿ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಉಷಾ ರವರು ಪಂಜ ಗ್ರಾಮ ಸಭೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.