HomePage_Banner
HomePage_Banner

ಅಕ್ರಮ ಜಾನುವಾರು ಸಾಗಾಟ: ಊರವರಿಂದ ಕಾರಿಗೆ ತಡೆ, ಇಬ್ಬರು ಪರಾರಿ ಒಬ್ಬರಿಗೆ ಹಲ್ಲೆ- ಕಾರು ಪುಡಿ

ಸ್ವಿಫ್ಟ್ ಕಾರೊಂದರಲ್ಲಿ ಅಕ್ರಮವಾಗಿ ದನ ಸಾಗಿಸುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಊರವರು ಕಾರನ್ನು ಅಡ್ಡಗಟ್ಟಿದಾಗ ಕಾರಲ್ಲಿದ್ದ ಇಬ್ಬರು ಪರಾರಿಯಾಗಿ ಓರ್ವ ಸಿಕ್ಕಿಬಿದ್ದ ಹಾಗೂ ಊರವರು ಆತನ ಮೇಲೆ ಹಲ್ಲೆಗೈದು, ಕಾರನ್ನು ಜಖಂಗೊಳಿಸಿದ ಘಟನೆ ನಿನ್ನೆ ರಾತ್ರಿ ಪಂಜದಿಂದ ವರದಿಯಾಗಿದೆ.

ಏನೆಕಲ್ ಕಡೆಯಿಂದ ಬಂದ ಸ್ವಿಫ್ಟ್ ಕಾರೊಂದರಲ್ಲಿ ಹೋರಿಯೊಂದನ್ನು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ದೊರೆತು ಊರ ಕೆಲವರು ಪಂಜದಲ್ಲಿ ಕಾರನ್ನು ಅಡ್ಡಗಟ್ಟಿದರು. ಆ ಸಂದರ್ಭ ಕಾರಲ್ಲಿದ್ದ ಮೂವರಲ್ಲಿ ಇಬ್ಬರು ತಪ್ಪಿಸಿಕೊಂಡು ಪರಾರಿಯಾದರೆ ಓರ್ವ ಸಿಕ್ಕಿಬಿದ್ದರು. ಕಾರಿನ ಹಿಂಬದಿಯಲ್ಲಿ ಹೋರಿಯನ್ನು ಕೈಕಾಲು ಕಟ್ಟಿ ತುಂಬಿಸಲಾಗಿತ್ತು. ಇದನ್ನು ಕಂಡ ಊರವರು ಆಕ್ರೋಶಿತರಾಗಿ ಸಿಕ್ಕಿಬಿದ್ದ ವ್ಯಕ್ತಿಯಾದ ಮರ್ದಾಳದ ಯಾಕೂಬ್ ಎಂಬವರ ಮೇಲೆ ಹಲ್ಲೆ ನಡೆಸಿದರಲ್ಲದೆ ಕಾರನ್ನು ಜಖಂಗೊಳಿಸಿದರು.

ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ವಿಷಯ ತಿಳಿದು ಬೆಳ್ಳಾರೆ ಪೊಲೀಸ್ ಎಸ್‌ಐ ಈರಯ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದರು. ಆ ಸಂದರ್ಭ ಸ್ಥಳದಲ್ಲಿ ನೂರಾರು ಜನ ಸೇರಿದ್ದು, ಕೆಲವು ವಾಹನಗಳನ್ನು ನಿಲ್ಲಿಸಲ್ಪಟ್ಟಿದ್ದವು ಎನ್ನಲಾಗಿದೆ. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದರೆಂದೂ, ಈ ವೇಳೆ ಊರವರು ಪೊಲೀಸರನ್ನೇ ಅಡ್ಡಗಟ್ಟಿ ಲಾಠಿ ಚಾರ್ಜ್ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರೆಂದು ತಿಳಿದು ಬಂದಿದೆ. ಬಳಿಕ ಎಸ್‌ಐ ಈರಯ್ಯರವರು ಜನರನ್ನು ಸಮಾಧಾನಿಸಿ, ಕಾರು ಮತ್ತು ಕಾರಲ್ಲಿದ್ದ ವ್ಯಕ್ತಿ ಹಾಗೂ ದನವನ್ನು ಬೆಳ್ಳಾರೆ ಠಾಣೆಗೆ ಕರೆದೊಯ್ದರು. ಜಾನುವಾರನ್ನು ಏನೆಕಲ್ಲಿನಿಂದ ಖರೀದಿಸಿ ಕಡಬದ ಮರ್ದಾಳಕ್ಕೆ ಅಲ್ಲಿಯ ಇಬ್ರಾಹಿಂ ಎಂಬವರು ತಮ್ಮ ಕಾರಿನಲ್ಲಿ ಕೊಂಡೊಯ್ಯುತ್ತಿದ್ದರೆಂದು ತಿಳಿದು ಬಂದಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

1 Comment

  1. ಫೈಝಲ್ ಬೆಳ್ಳಾರೆ

    ದೇಶದ ಉತ್ತರ ಭಾಗದಲ್ಲಿ ನಡೆಯುತ್ತಿರುವ ಸಂಘಪರಿವಾರ ಕ್ರ್ ಪಾ ಪೋಶಿತ ಗುಂಪು ಹಿಂಸಾ ಹತ್ಯೆಗಳ ಆರಂಭ ದಕ್ಷಿಣ ಭಾರತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಂಜದಿಂದ ಆರಂಭವಾಗಿರುವುದು ಖಂಡನೀಯ.
    ಸರಕಾರ ಮತ್ತು ಪೋಲೀಸ್ ಇಲಾಖೆ ಈ ಘಟಣೆಯಲ್ಲಿ ಎಲ್ಲಾ ತಪ್ಪಿತಸ್ತರ ವಿರುದ್ದ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾದಲ್ಲಿ ಇದಕ್ಕಿಂತಲೂ ಅಪಾಯಕಾರಿ ಸನ್ನಿವೇಶಗಳು ಸಂಘಪರಿವಾರದ ಗೂಂಡಾಗಳಿಂದ ನಿರ್ಮಾಣವಾಗಬಹುದು.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.