ಬೆಂಗಳೂರಿನಲ್ಲಿ ನೆಲೆಸಿರುವ ಸುಳ್ಯದವರ ಸ್ನೇಹಮಿಲನ : ಮತದಾರರಿಗೆ ಕೃತಜ್ಞತೆ, ಶಾಸಕ ಅಂಗಾರರಿಗೆ ಸನ್ಮಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಬೆಂಗಳೂರಿನಲ್ಲಿ ನೆಲೆಸಿರುವ ಸುಳ್ಯದವರ ಸ್ನೇಹಮಿಲನ ಹಾಗೂ ಮತದಾರರಿಗೆ ಕೃತಜ್ಞತೆ, ಶಾಸಕ ಎಸ್. ಅಂಗಾರರಿಗೆ ಸನ್ಮಾನ ಸಮಾರಂಭವು ಬೆಂಗಳುರಿನ ಚಂದಾಪುರದ ಕೆ.ಎಂ.ಎಸ್. ಕಲ್ಯಾಣ ಮಂದಿರದಲ್ಲಿ ಆ. 12ರಂದು ನಡೆಯಿತು. ಶಾಸಕ ಎಸ್.ಅಂಗಾರರವು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಿ.ಎಲ್.ಸಂತೋಷ್‌ರವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಬೆಂಗಳುರಿನಲ್ಲಿ ನೆಲೆಸಿರುವ ಸುಳ್ಯದವರ ವತಿಯಿಂದ ಶಾಸಕ ಎಸ್.ಅಂಗಾರವರನ್ನು ಸನ್ಮಾನಿಸಲಾಯಿತು. ಸುಳ್ಯ ತಾಲೂಕಿನಾದ್ಯಂತ ಹಲವಾರು ರಸ್ತೆಗಳು ದುರಸ್ಥಿಯಲ್ಲಿದ್ದು ಅದನ್ನು ಸರಿಪಡಿಸುವಂತೆ ಸಭೆಯಲ್ಲಿದ್ದ ಬಹುತೇಕರು ಶಾಸಕರಲ್ಲಿ ಮನವಿ ಮಾಡಿದರು.
ಸುಳ್ಯದ ೨೫೦ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಜೇಶ್ ಅಂಬೆಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಯು.ಆರ್.ಎಸ್.ಎಸ್.ಸಂಘಟನೆಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮುಖ್ಯ ಅತಿಥಿಯಾಗಿ ಸ್ನೇಹ ಮಿಲನದ ಮಹತ್ವ ಹಾಗೂ ಅರಿವಿಕೆಯನ್ನು ಮೂಡಿಸಿ, ಯುವಜನರಲ್ಲಿ ಸಂಘಟನೆಯ ಮಹತ್ವ ಹಾಗೂ ಉಪಪಯೋಗಗಳನ್ನು ತಿಳಿಸಿದರು. ಅಂಗಾರರವರು ಸುಳ್ಯದ ಸಮಸ್ಯೆಗಳಾದ ರಸ್ತೆ, ಮೊಬೈಲ್ ನೆಟ್ವರ್ಕ್, ಕಸ್ತೂರಿ ರಂಗನ್ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು. ಸಂತೋಷ್‌ಕುಮಾರ್ ನಡುಮುಟ್ಲು, ಮೋಹನ್, ಹವ್ಯಾಸ್, ದೀಕ್ಷಿತ್ ಬದಿಕಾನ, ಕಿರಣ್ ಕೊಯಿಂಗಾಜೆ, ಯೋಗೀಶ್, ಧನರಾಜ್ ಮುಚ್ಚಾರ , ಸುರೇಶ್ ಕೊಂಬಾರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಸಂತೋಷ್‌ಕುಮಾರ್ ನಡುಮುಟ್ಲು ಸ್ವಾಗತಿಸಿದರು.

 

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.