Breaking News

ಪಂಜ ಲಯನ್ಸ್ ಕ್ಲಬ್ ವತಿಯಿಂದ ನೇಜಿ ನಾಟಿ ಕಾರ್ಯಕ್ರಮ

Advt_Headding_Middle
Advt_Headding_Middle

ಪಂಜ ಲಯನ್ಸ್ ಕ್ಲಬ್ ವತಿಯಿಂದ ಕಲ್ಮಡ್ಕ ಗ್ರಾಮದ ನಡ್ಕದ ಭತ್ತದ ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮ ನಡೆಯಿತು.

 

ಲಯನ್ಸ್ ಜಿಲ್ಲಾ ರಾಜ್ಯಪಾಲರ ಕಾರ್ಯಕ್ರಮವಾದ ಕೃಷಿಗೆ ಒತ್ತು ಕೊಟ್ಟ ಪಂಜ ಲಯನ್ಸ್ ಕ್ಲಬ್ ಸ್ಥಳೀಯ ಪಡ್ಪಿನಂಗಡಿ ಪ್ರಕೃತಿ ಯುವತಿ ಮಂಡಲದ ಸದಸ್ಯರನ್ನು ಸೇರಿಸಿಕೊಂಡು ನೇಜಿ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. 

ಲಯನ್ಸ್ ಪ್ರಾಂತ್ಯ ೭ರ ಅಧ್ಯಕ್ಷ ಲ. ಜಾಕೆ ಮಾಧವ ಗೌಡರು ಅಡಿಕೆ ಮತ್ತು ವೀಳ್ಯವನ್ನು ಗದ್ದೆಗೆ ಅರ್ಪಿಸುವ ಮೂಲಕ ಉದ್ಘಾಟಿಸಿದರು.
ಲಯನ್ಸ್ ಅಧ್ಯಕ್ಷರಾದ ಲ. ತುಕರಾಮ್ ಏನೆಕಲ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. 

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಲ. ಬಾಲಕೃಷ್ಣ ಗೌಡ ಮೂಲೆಮನೆ, ಕೋಶಾಧಿಕಾರಿ ಲ. ಸುಚಿನ್ನ ಕಾಣಿಕೆ, ಭತ್ತದ ಗದ್ದೆಯ ಮಾಲಕ ಲ. ಸುರೇಶ್ ನಡ್ಕ ಮತ್ತು ಮಮತಾ ಸುರೇಶ್, ಪ್ರಕೃತಿ ಯುವತಿ ಮಂಡಲದ ಅಧ್ಯಕ್ಷೆ ತಾರಾ ಪಡ್ಪಿನಂಗಡಿ ಹಾಗೂ ಸದಸ್ಯರು ಭಾಗವಹಿಸಿದ್ದರು. ನಿಂತಿಕಲ್ಲು ಕೃಷಿ ಯಂತ್ರಧಾರೆ ಕೇಂದ್ರದ ಪ್ರಬಂಧಕರಾದ ಸಂತೋಷ್‌ರವರು ಕೃಷಿಗೆ ಪೂರಕವಾದ ಕೃಷಿ ಯಂತ್ರಗಳ ಬಗ್ಗೆ ಮಾಹಿತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.