ಮೊಗರ್ಪಣೆ ನೂರುಲ್‌ಇಸ್ಲಾಂ ಮದರಸ ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಭೆ

Advt_Headding_Middle
Advt_Headding_Middle

ಮೊಗರ್ಪಣೆ ನೂರುಲ್‌ಇಸ್ಲಾಂ ಮದರಸ ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಭೆ ಸೆ. 2 ರಂದು ಮದರಸ ಸಭಾಂಗಣದಲ್ಲಿ ನಡೆಯಿತು. ಮುಅಲ್ಲಿಂ ಇಬ್ರಾಹಿಂ ಸಖಾಫಿ ದುವಾ ನೆರವೇರಿಸಿದರು.

ಜಯನಗರ ಮದರಸ ಸದರ್ ಮುಅಲ್ಲಿಂ ಅಬ್ದುಲ್ ಕರೀಂ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿ ಸಭೆಯಲ್ಲಿ ಭಾಗವಹಿಸಿದ್ದವರನ್ನು ಸ್ವಾಗತಿಸಿದರು. ಸ್ಥಳೀಯ ಮುದರ್ರಿಸ್ ರಾಫಿ ಅಹ್ಸನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸ್ಥಳೀಯ ಮದರಸ ಸದರ್ ಮುಅಲ್ಲಿಂ ಮಹಮ್ಮದ್ ಅಲಿ ಸಖಾಫಿ ವಿದ್ಯಾರ್ಥಿಗಳ ಜೀವನದಲ್ಲಿ ರಕ್ಷಕ ಶಿಕ್ಷಕರ ಪಾತ್ರವೇನು ಎಂಬ ವಿಷಯ ಕುರಿತು ತರಬೇತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ ವಹಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಹಾಜಿ ಎಚ್ ಎ ಉಮ್ಮರ್ ಹಾಜಿ, ಸದಸ್ಯರುಗಳಾದ ಉಸ್ಮಾನ್,ನಝೀರ್ ಶಾಂತಿನಗರ,ಮುಅಲ್ಲಿಂರಾದ ಅಬ್ದುಲ್ ರಶೀದ್ ಝೈನಿ, ಮಹಮ್ಮದ್ ನಾಸಿರ್ ಸಖಾಫಿ, ಅಬ್ದುಲ್ ಕಲಾಂ ಝುಹ್ರಿ ಬೆಳ್ಳಾರೆ, ಮೂಸಾ ಮುಸ್ಲಿಯಾರ್ ಅಜ್ಜಾವರ, ಕಾರ್ಯದರ್ಶಿ ಜಿ ಎ ರಹಮಾನ್ ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಮದರಸ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.