Breaking News

ಪೈಲಾರು : ಮಿತ್ರ ವೃಂದದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ

Advt_Headding_Middle
Advt_Headding_Middle

ಪೈಲಾರು ಮಿತ್ರ ವೃಂದದ ವತಿಯಿಂದ 32 ನೇ ವಷ೯ದ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಹಿ. ಪ್ರಾ. ಶಾಲೆ ಪೈಲಾರಿನಲ್ಲಿ ಆಚರಿಸಲಾಯಿತು. ಕೊಡಗು ಪ್ರಕೃತಿ ದುರಂತ ಸಂಭವಿಸಿದ್ದರಿಂದ ಸರಳವಾಗಿ ಆಚರಿಸಲಾಯಿತು. ಸಂಗ್ರಹಿಸಿದ ಒಟ್ಟು ದೇಣಿಗೆಯನ್ನು ಕೊಡಗಿನ ಸಂತೃಸ್ತರಿಗೆ ನೆರವು ನೀಡಲಾಯಿತು.

ಬೆಳಿಗ್ಗೆ ಭಜನೆ ಆರಂಭಗೊಂಡು ಪ್ರಸಾದ ವಿತರಣೆ ನಡೆದು, ಅಂಗನವಾಡಿ ಮಕ್ಕಳಿಗೆ , ಶಾಲಾ ಮಕ್ಕಳಿಗೆ ಆಟೋಟ ಸ್ಪಧೆ೯ಗಳು, ಸಾವ೯ಜನಿಕ ಪುರುಷ ಮತ್ತು ಮಹಿಳೆಯರಿಗೆ ಎಣ್ಣೆಕಂಬ ನಡಿಗೆ ಸ್ಪಧೆ೯ ನಡೆಯಿತು. ಊರಿನ ಹಿರಿಯರಾದ ಸಾವಿತ್ರಿ ಮೊಂಟಡ್ಕರವರು ದೀಪ ಬೆಳಗಿಸಿ ಕಾಯ೯ಕ್ರಮ ಉದ್ಘಾಟಿಸಿದರು.

ಸಮಾರೋಪ ಸಮಾರಂಭದಲ್ಲಿ ಮಿತ್ರ ವೃಂದದ ಅಧ್ಯಕ್ಷ ಜಯಂತ್ ನಾಯರ್ ಕಲ್ಲು ಅಧ್ಯಕ್ಷತೆ ವಹಿಸಿದ್ದರು. ಬಹುಮಾನ ವಿತರಕರಾಗಿ ರಜನಿಕಾಂತ್ ಉಮ್ಮಡ್ಕ, ಮುಖ್ಯ ಅತಿಥಿಗಳಾಗಿ ಅಮರಮುಡ್ನೂರು ಗ್ರಾ.ಪಂ. ಸದಸ್ಯ ಶಿವರಾಮ ಕೆರೆಮೂಲೆ, ಚೊಕ್ಕಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸದಾಶಿವ ಗೌಡ ಮೂಕಮಲೆ, ಪ್ರದೀಪ್ ಬೊಳ್ಳೂರು, ಧಮಾ೯ನಂದ ಮೊಂಟಡ್ಕ, ಮಿತ್ರ ವೃಂದದ ಸದಸ್ಯರು ಹಾಗೂ ಊರವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.