ಅಕ್ರಮ ಜೂಜಾಟ-ಮೂವರ ಬಂಧನ

Advt_Headding_Middle
Advt_Headding_Middle

ಅಮರ ಮೂಡ್ನೂರು ಗ್ರಾಮದ ಆನೇಕಾರು ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವನ್ನಾಗಿ ಇಟ್ಟುಕೊಂಡು ಜೂಜಾಟ ಆಡುತ್ತಿದ್ದ ಮೂವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಅಮರಮೂಡ್ನೂರು ಗ್ರಾಮದ ಕರುಣಾಕರ ( ೪೫ ವರ್ಷ) ಕಿಶೋರ್ (೨೫ ವರ್ಷ) ಪ್ರಸಾದ್ (೩೧ವರ್ಷ) ಬಂಧಿತ ಆರೋಪಿಗಳು. ಇನ್ನುಳಿದ ಆರೋಪಿಗಳಾದ ಬಾಲಚಂದ್ರ, ಮೋಹನ, ಯೋಗೀಶ ತಲೆಮರೆಸಿಕೊಂಡಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಮರ ಮೂಡ್ನೂರು ಗ್ರಾಮದ ಆನೇಕಾರು ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವನ್ನಾಗಿ ಇಟ್ಟುಕೊಂಡು ಜೂಜಾಟ ಆಡುತ್ತಿರುವುದಾಗಿ ಬಂದ ಮಾಹಿತಿಯ ಆಧಾರದ ಮೇರೆಗೆ ಎಸ್.ಪಿ. ಡಾ ರವಿಕಾಂತೇಗೌಡ ಐ.ಪಿ.ಎಸ್. ರವರ ಆದೇಶದಂತೆ ಹೆಚ್ಚುವರಿ ಎಸ್.ಪಿ.ಸಜಿತ್ ಹಾಗೂ ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್‌ರವರ ಮಾರ್ಗದರ್ಶನದಲ್ಲಿ ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಸತೀಶ್ ಕುಮಾರ್,  psi  ಈರಯ್ಯ, Asi ಮಧು,,hc ಗಳಾದ ಬಾಲಕೃಷ್ಣ, ಮೋಹನ್, pcಮಂಜುನಾಥ್
ನೇತೃತ್ವದಲ್ಲಿ ದಾಳಿ ನಡೆಸಿದೆ. ಬಂಧಿತರಿಂದ ೬೨೨೦ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.