ಪೊಳೆಂಜ ಯುವಶಕ್ತಿ ಗೆಳೆಯರ ಬಳಗದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮತ್ತು ಮೊಸರು ಕುಡಿಕೆ, ಸನ್ಮಾನ

Advt_Headding_Middle
Advt_Headding_Middle

ಯುವಶಕ್ತಿ ಗೆಳೆಯರ ಬಳಗ ಪೊಳೆಂಜ ಪಂಜ ವತಿಯಿಂದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಮೊಸರು ಕುಡಿಕೆ ಮತ್ತು ಸ್ಪರ್ಧಾ ಕಾರ್ಯಕ್ರಮಗಳು ಸೆ. ೦2 ರಂದು ಪಾಂಡಿಗದ್ದೆ ಶಾಲಾ ವಠಾರದಲ್ಲಿ ಜರಗಿತು.


ಕಾರ್ಯಕ್ರಮವನ್ನು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ರತ್ನಾವತಿ ಚೆನ್ನಪ್ಪ ಗೌಡ ಬೊಳ್ಳಾಜೆ ಉದ್ಘಾಟಿಸಿದರು. ಅತಿಥಿಯಾಗಿ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಯುವಶಕ್ತಿ ಗೆಳೆಯರ ಬಳಗದ ಪದ್ಮನಾಭ ಗೌಡ ಬೊಳ್ಳಾಜೆ ನಿವೃತ್ತ ಸೈನಿಕ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಾಂಡಿಗದ್ದೆ ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷ ಬಾಲಕೃಷ್ಣ ಬೊಳ್ಳಾಜೆ, ಗೆಳೆಯರ ಬಳಗದ ಗೌರವಾಧ್ಯಕ್ಷ ಮೋನಪ್ಪ ಗೌಡ ಬೊಳ್ಳಾಜೆ ಹಾಗೂ ಗೆಳೆಯರ ಬಳಗದ ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ನಳಿನಾಕ್ಷಿ ವಿ.ಆಚಾರ್ಯ ಕಲ್ಮಡ್ಕರವರು ಉಪನ್ಯಾಸ ನೀಡಿದರು. ಕೃಷ್ಣಯ್ಯ ಕಾಣಿಕೆ ಸಹಾಯಕ ಪೋಲಿಸ್ ಉಪ ನಿರೀಕ್ಷಕರು ಪೋಲಿಸ್ ಠಾಣೆ ಸುಳ್ಯ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮೋನಪ್ಪ ಗೌಡ ಬೊಳ್ಳಾಜೆ ಸ್ವಾಗತಿಸಿದರು. ಸೋಮಶೇಖರ್ ನೇರಳ ನಿರೂಪಿಸಿದರು. ಗೆಳೆಯರ ಬಳಗದ ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.