ಜಾಲ್ಸೂರು ಗ್ರಾ.ಪಂ. ಸದಸ್ಯ ದಯಾನಂದ ಅವರಿಗೆ ಜಾಲ್ಸೂರು ರಿಕ್ಷಾ ಚಾಲಕರಿಂದ ಧನಸಹಾಯ

Advt_Headding_Middle
Advt_Headding_Middle

ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಜಾಲ್ಸೂರಿನಲ್ಲಿ ರಿಕ್ಷಾ ಚಾಲಕರಾಗಿರುವ ಎಂ.ಎಸ್.ದಯಾನಂದ ಮಹಾಬಲಡ್ಕ ಅವರು ಅಸೌಖ್ಯದಿಂದಾಗಿ ಇತ್ತೀಚಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಇದೀಗ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು ಅವರಿಗೆ ಜಾಲ್ಸೂರು ಬಿ.ಎಂ.ಎಸ್. ಅಟೋ ಚಾಲಕರ ಸಂಘದ ವತಿಯಿಂದ ರೂ. 10  ಸಾವಿರ ಧನಸಹಾಯವನ್ನು ಆ. 30 ರಂದು ದಯಾನಂದ ಅವರಿಗೆ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ದಯಾನಂದ ಅವರ ತಂದೆ ಸುಬ್ಬಣ್ಣ ನಾಯ್ಕ, ಜಾಲ್ಸೂರು ಬಿ.ಎಂ.ಎಸ್.ಘಟಕದ ಅಧ್ಯಕ್ಷ ಗೋಪಾಲ ಅಡ್ಕಾರು ಪದವು, ಕಾರ್ಯದರ್ಶಿ ಸತೀಶ್ ಕಲಾಕೇಸರಿ, ಉಪಾಧ್ಯಕ್ಷ ಕರುಣಾಕರ ಕಾಡುಸೊರಂಜ, ಜತೆ ಕಾರ್ಯದರ್ಶಿ ದಿನೇಶ್ ಹಾಗೂ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.