ಸುಬ್ರಹ್ಮಣ್ಯ ವರ್ತಕರ ಸಂಘ ಪತ್ರಿಕಾ ಗೋಷ್ಠಿ : ಸೆ.10 ರಂದು ಎಲ್ಲಾ ರಸ್ತೆಗಳ ಬಂದ್ ಗೆ ಬೆಂಬಲ

Advt_Headding_Middle
Advt_Headding_Middle

ಸುಬ್ರಹ್ಮಣ್ಯ ವರ್ತಕರ ಸಂಘದ ವತಿಯಿಂದ ಸುಬ್ರಹ್ಮಣ್ಯ ದಲ್ಲಿ ಪತ್ರಿಕಾ ಗೋಷ್ಠಿ ಕರೆದಿದ್ದು ಸೆ.10 ರ ಒಳಗಾಗಿ ಸುಬ್ರಹ್ಮಣ್ಯ ಕ್ಕೆ ಬರುವ ಬಹುತೇಕ ರಸ್ತೆಗಳನ್ನು ಲಘು ವಾಹನಗಳಿಗೆ ಮುಕ್ತಗೊಳಿಸದಿದ್ದಲ್ಲಿ ಸೆ.10 ರಂದು ಸುಬ್ರಹ್ಮಣ್ಯ ಕ್ಕೆ ಬರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದ್ದಾರೆ.

ಸೆ.10 ರಂದು ಮಲೆನಾಡು ಹಿತ ರಕ್ಷಣಾ ವೇದಿಕೆಯ ವತಿಯಿಂದ ಬೃಹತ್ ಪ್ರತಿಭಟನೆ ಗುಂಡ್ಯದಲ್ಲಿ ನಡೆಯಲಿದ್ದು ಅದಕ್ಕೆ ಸಂಪೂರ್ಣ ಬೆಂಬಲವಿದೆ ಎಂದರು. ಸುಬ್ರಹ್ಮಣ್ಯ ಬರುವ ರಸ್ತೆಗಳು ತೀರಾ ಕೆಟ್ಟಿರುವ ಬಗ್ಗೆ ಸುಬ್ರಹ್ಮಣ್ಯ ವರ್ತಕರ ಸಂಘ ಯಾಕೆ ಮೌನ ವಹಿಸಿದೆ ಎಂದು ಪತ್ರಕರ್ತರು ಕೇಳಿದಾಗ ನಾವು ಈ ಹಿಂದೆ ಮನವಿ ಅರ್ಪಿಸಿದ್ದೇವೆ ಎಂದರಲ್ಲದೆ ದೇವಸ್ಥಾನ ವತಿಯಿಂದ ಅಗತ್ಯವಿದ್ದಲ್ಲಿ ಇಂಟರ್ ಲಾಕ್ ಹಾಕುವ ಯೋಜನೆ ಮಾಡಿದ್ದರು ಕೇವಲ ಕ್ಷುಲ್ಲಕ ಕಾರಣ ಇಟ್ಟುಕೊಂಡು ಅದನ್ನು ಕೂಡ ತಡೆಹಿಡಿದರು ಎಂದು ಹರೀಶ್ ಇಂಜಾಡಿ ತಿಳಿಸಿದರು.

ಸೆ. 4ರಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಶಿವಕುಮಾರ್ ಕಾಮತ್, ಸಂಚಾಲಕ ಗೋಪಾಲ ಎಣ್ಣೆಮಜಲು, ಹರೀಶ್ ಇಂಜಾಡಿ, ಸತೀಶ್ ಭಟ್ ಮಾನಾಡು, ಗಿರಿಧರ ಸ್ಕಂದ, ಎಚ್.ಎಲ್ ವೆಂಕಟೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.