ಸೆ. 13: ಬಾಳಿಲ ಗಣೇಶೋತ್ಸವ

Advt_Headding_Middle
Advt_Headding_Middle


ಬಾಳಿಲ – ಮುಪ್ಪೆರ್ಯ ನಾಗರಿಕ ಸೇವಾ ಸಮಿತಿ ಇದರ ಆಶ್ರಯದಲ್ಲಿ ೩೫ನೇ ವರ್ಷದ ನಾಡಹಬ್ಬ ಗಣೇಶೋತ್ಸವ – ೨೦೧೮ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಠಾರದಲ್ಲಿ ಸೆ. 13 ರಂದು ನಡೆಯಲಿದೆ.

ಬೆ. ಗಂಟೆ ೯.೦೦ಕ್ಕೆ ಗಣಪತಿ ಪ್ರತಿಷ್ಠೆ, ಮ. ೧.೦೦ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ಭೋಜನ, ರಾತ್ರಿ ಗಂಟೆ ೧೦.೦೦ರಿಂದ ಮಹಾಪೂಜೆ ಪ್ರಸಾದ ವಿತರಣೆ ನಡೆದ ಬಳಿಕ ಬಾಳಿಲದಿಂದ ಬೊಮ್ಮನಮಜಲಿಗೆ ವಿಜೃಂಭಣೆಯ ಶೋಭಾಯಾತ್ರೆ ಮೂಲಕ ಮೂರ್ತಿ ವಿಸರ್ಜನೆ ನಡೆಯಲಿದೆ. ಮ. ೧೧.೩೦ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದ್ದು, ಅಧ್ಯಕ್ಷತೆಯನ್ನು ನಾಗರಿಕ ಸೇವಾ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ಅಧ್ಯಕ್ಷ ಗಂಗಾಧರ ಮುಪ್ಪೇರ್ಯ ವಹಿಸಲಿದ್ದಾರೆ.

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮೋಂತಿಮಾರು ಇದರ ಆಡಳಿತ ಮೊಕ್ತೇಸರ ವಿಕಾಸ್ ಪುತ್ತೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಸ್. ಅಂಗಾರ, ಬೆಂಗಳೂರಿನಲ್ಲಿ ಡಿ.ವೈ.ಎಸ್.ಪಿ. ಆಗಿರುವ ಜಗನ್ನಾಥ ರೈ ಬಜನಿಗುತ್ತು, ಬೆಳ್ಳಾರೆ ಪೋಲೀಸ್ ಠಾಣಾಧಿಕಾರಿ ಈರಯ್ಯ, ಬಾಳಿಲ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಹೇಮಲತಾ ಕಾಯಾರ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಕಾರ್ಯಕರ್ತರಾದ ನಾರಾಯಣ ಮಡಿವಾಳ. ವಿಠಲ ಎಂ. ಕೊಡೆಂಕಿರಿ, ಸುಬ್ಬಣ್ಣ ಪಾಜಪಳ್ಳ ಮತ್ತು ನಾರಾಯಣ ನಾಯ್ಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಅನಾರೋಗ್ಯ ಪೀಡಿತರಾದ ಶೀನಪ್ಪ ಪಾಜಪಳ್ಳ, ಸುಶೀಲ ಪಂಜಿಗಾರು ಮತ್ತು ಜಿತೇಶ್ ಮುಪ್ಪೇರ್ಯರಿಗೆ ತಲಾ ರೂ. ೫,೦೦೦/-ದಂತೆ ನಗದುವಿತರಣೆ ಮಾಡಲಾಗುವುದು.

ಬೆ. ೯.೩೦ರಿಂದ ಮ. ೧೨.೩೦ರ ತನಕ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಢಾ ಸ್ಪರ್ಧೆಗಳು ಪುಟಾಣಿಗಳಿಗೆ, ಶಾಲಾ ಮಕ್ಕಳಿಗೆ ಮತ್ತು ಸಾರ್ವನಿಕರಿಗೆ ನಡೆಯಲಿದೆ. ೪೫ ಕೆ.ಜಿ. ತೂಕದ ಹುಡುಗರಿಗೆ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ವಿಜೇತರಿಗೆ ಫಲಕಗಳೊಂದಿಗೆ: ಪ್ರ. ರೂ. ೨,೦೦೦/-, ದ್ವಿ. ೧,೫೦೦. ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೊಳಪಟ್ಟ, ೬೫ ಕೆ.ಜಿ. ತೂಕದ ಪುರುಷರಿಗೆ ನಡೆಯಲಿರುವ ಕಬಡ್ಡಿ ಪಂದ್ಯಾಟದ ವಿಜೇತರಿಗೆ ಶಾಶ್ವತ ಫಲಕಗಳೊಂದಿಗೆ ೫,೫೫೫/-. ದ್ವಿ. ರೂ. ೩,೩೩೩/-, ತೃತೀಯ ಮತ್ತು ಚತುರ್ಥ ಶಾಶ್ವತ ಫಲಕಗಳನ್ನು ನೀಡಲಾಗುವುದು. ಮಹಿಳೆಯರಿಗೆ ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು, ತ್ರೋಬಾಲ್, ಸಂಗೀತ ಕುರ್ಚಿ. ಪುರುಷರಿಗೆ ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆಗಳು ನಡೆಯಲಿದೆ. ವಿಶೇಷ ಆಕರ್ಷಣೆಯ ಗ್ರಾಮೀಣ ಆಟ ತಪ್ಪಂಗಾಯಿ ಪುರುಷರಿಗೆ ನಡೆಯಲಿದೆ. ಸಂಜೆ ೭.೦೦ರಿಂದ ಯಕ್ಷಗಾನ ಬಯಲಾಟ ತ್ರಿಪುರ ಮಥನ ನಡೆಯಲಿದ್ದು, ಭಾಗವತರಾಗಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ರಾಮಚಂದ್ರ ರೈ ಕಡಬ ಮತ್ತು ಮುಮ್ಮೇಳದಲ್ಲಿ ದಿನೇಶ್ ಶೆಟ್ಟಿ ಕಾವಲಕಟ್ಟೆ, ಶಂಭಯ್ಯ ಕಂಜರ್ಪಣೆ, ವಿನೋದ್ ರೈ ಸೊರಕೆ, ಮಹೇಶ್ ಮಣಿಯಾಣಿ, ಶಶಿಕಿರಣ ಕಾವು, ಮನೋಹರ ರೈ ಬೆಳ್ಳಾರೆ, ಹರೀಶ್ ಬೆಳ್ಳಾರೆ, ಜನಾರ್ಧನ ಕುಂದಾಪುರ, ತಾರಾನಾಥ ರೈ ಕುಂಬ್ರ, ಲಕ್ಷ್ಮೀಶ ರೈ ಗುರಿಕ್ಕಾನ ಸಂಜೀವ ಶಿರಂಕಲ್ಲು, ಗೋಪಾಲ ಶೆಟ್ಟಿ ಕಳಂಜ, ಪುರುಷೋತ್ತಮ ಪೆರುವಾಜೆ, ರಮೇಶ್ ರೈ ಮೊದಲಾದವರು ಭಾಗವಹಿಸಲಿದ್ದಾರೆ. ಸಮಿತಿಯ ಗೌರವಾಧ್ಯಕ್ಷರಾಗಿ ಪಿ.ಜಿ.ಎಸ್.ಎನ್. ಪ್ರಸಾದ್, ಅಧ್ಯಕ್ಷರಾಗಿ ಗಂಗಾದರ ಮುಪ್ಪೇರ್ಯ, ಪ್ರಧಾನ ಕಾರ್ಯದರ್ಶಿಯಾಗಿ ರವಿಪ್ರಕಾಶ್ ಮುಪ್ಪೇರ್ಯ, ಉಪಾಧ್ಯಕ್ಷರಾಗಿ ಸೂರ್ಯಕಾಂತ ಅಲೇಕಿ, ಕೋಶಾಧಿಕಾರಿಯಾಗಿ ಯತೀಶ್ ಕುಕ್ಕುತ್ತಡಿ ಮತ್ತು ಉಪಕಾರ್ಯದರ್ಶಿಯಾಗಿ ಮೋನಪ್ಪ ದೇವಸ್ಯ ಸೇವೆ ಸಲ್ಲಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.