ಎನ್ನೆಂಸಿ: ನೆರೆ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡ ಅಭಿಜಿತ್ ಟಿ.ಎಲ್.ಗೆ ರೆಡ್ ಕ್ರಾಸ್ ವತಿಯಿಂದ ಅಭಿನಂದನೆ

Advt_Headding_Middle
Advt_Headding_Middle

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿ ನೂರಾರು ಜನರ ಜೀವ ರಕ್ಷಣೆ ಮಾಡುವುದರೊಂದಿಗೆ ಪ್ರಾಣಿಗಳ ರಕ್ಷಣೆಗೈದು ಮಾನವೀಯತೆ ಮೆರೆದ ಕಾಲೇಜಿನ ರೆಡ್‌ಕ್ರಾಸ್ ಘಟಕದ ಹಿರಿಯ ಸದಸ್ಯ ಅಭಿಜಿತ್ ಟಿ ಎಲ್ ಅವರನ್ನು ಅಭಿನಂದಿಸಲಾಯಿತು. ಮೂರು ಅಂತರ್ ಕಾಲೇಜು ಮಟ್ಟದ ವಿಪತ್ತು ನಿರ್ವಹಣಾ ಶಿಬಿರ, ಒಂದು ರಾಜ್ಯ ಹಾಗೂ ಒಂದು ಅಂತರಾಜ್ಯ ಮಟ್ಟದ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದು ಅಲ್ಲಿ ಪಡೆದ ಅನುಭವಗಳನ್ನು ಕಾರ್ಯರೂಪಕ್ಕೆ ತರುವಂತೆ ದ.ಕ ಜಿಲ್ಲಾ ಪೋಲೀಸ್ ತಂಡದೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡು, ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯೋದ್ದೇಶಗಳಿಗೆ ಬದ್ಧವಾಗಿ ನಡೆದ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ರೆಡ್‌ಕ್ರಾಸ್ ಘಟಕದ ಚಯರ್‌ಮನ್ ಸಚೇತ್ ಸುವರ್ಣ, ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ರತ್ನಾವತಿ ಡಿ, ಕಾರ್ಯಾಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಅಭಿನಂದಿಸಿದರು.


ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಭಿಜಿತ್, ರೆಡ್‌ಕ್ರಾಸ್ ಸಂಸ್ಥೆಯಿಂದ ಪಡೆದ ವಿಪತ್ತು ನಿರ್ವಹಣಾ ಶಿಬಿರಗಳಿಂದಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು, ತಮ್ಮ ರಕ್ಷಣೆ ಮಾಡಿಕೊಂಡು ಇನ್ನೊಬ್ಬರ ರಕ್ಷಣೆಯಲ್ಲಿ ತೊಡಗಿಕೊಳ್ಳುವುದು ಸಾಹಸವೇ ಸರಿ. ತನ್ನಿಂದ ಸಾದ್ಯವಾದಷ್ಟು ಮಟ್ಟಿಗೆ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ ಎಂದು ಆ ಸಂದರ್ಭದ ಅನುಭವಗಳನ್ನು ಹಂಚಿಕೊಂಡರು.
ಘಟಕ ನಾಯಕ ದೀಕ್ಷಿತ್ ಕೆ ಪಿ, ಹಿರಿಯ ಸದಸ್ಯ ಶ್ರೀವತ್ಸಾ ಉಪಸ್ಥಿತರಿದ್ದರು. ಪಲ್ಲವಿ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ತೇಜಸ್ ಸ್ವಾಗತಿಸಿ ಕುಮುದ ವಂದಿಸಿದರು. ನಳಿನಿ ಎಂ ಅಭಿನಂದನಾ ಪತ್ರ ವಾಚಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.